Select Your Language

Notifications

webdunia
webdunia
webdunia
webdunia

ಡಿಕೆ ಶಿವಕುಮಾರ್ ಸಿಎಂ ಕಚೇರಿಯಲ್ಲಿರಲಿದೆ ಈ ವಿಶೇಷ ವ್ಯಕ್ತಿಯ ಫೋಟೋ

DK Shivakumar
ಬೆಂಗಳೂರು: ಡಿಕೆ ಶಿವಕುಮಾರ್ ಸಿಎಂ ಆಗಿ ಅಧಿಕಾರ ಸ್ವೀಕರಿಸುತ್ತಿದ್ದಾರೆ. ಅವರ ಕಚೇರಿಯಲ್ಲಿ ಈ ವಿಶೇಷ ವ್ಯಕ್ತಿಯ ಫೋಟೋ ಇರಲಿದೆ. ಅವರು ಯಾರು ತಿಳಿದುಕೊಳ್ಳಿ.

ಇಂದು ಸಂಜೆ 4.05 ಕ್ಕೆ ಡಿಕೆ ಶಿವಕುಮಾರ್ ರಾಜ್ಯದ 25 ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅವರ ಪ್ರಮಾಣ ವಚನ ಸ್ವೀಕಾರಕ್ಕೆ ಮೊದಲು ಸಿಎಂ ಕಚೇರಿ ಸಿದ್ಧವಾಗಿದೆ. ಸಿದ್ದರಾಮಯ್ಯ ಹೆಸರು ತೆಗೆಯಲಾಗಿದ್ದು ಈಗ ಡಿಕೆ ಶಿವಕುಮಾರ್ ಹೆಸರು ಅಂಟಿಸಲಾಗಿದೆ.

ವಿಶೇಷವೆಂದರೆ ಡಿಕೆ ಶಿವಕುಮಾರ್ ಸಿಎಂ ಕಚೇರಿಯಲ್ಲಿ ವಿಶೇಷ ವ್ಯಕ್ತಿಯ ಫೋಟೋ ಇರಲಿದೆ. ಅವರೇ ಡಿಕೆಶಿ ತುಂಬಾ ನಂಬುವ ನೊಣವಿನಕೆರೆ ಅಜ್ಜಯ್ಯನ ಫೋಟೋ. ಸಿಎಂ ಆಗುವ ಮೊದಲು ಹಲವು ಬಾರಿ ನೊಣವಿನಕೆರೆ ಅಜ್ಜಯ್ಯನ ಮಠಕ್ಕೆ ಡಿಕೆಶಿ ಭೇಟಿ ನೀಡಿದ್ದರು.

ಅವರು ಸಿಎಂ ಎಂದು ಘೋಷಣೆಯಾದಾಗಲೂ ಮೌನ ಪಾಲಿಸುವಂತೆ ಅಜ್ಜಯ್ಯ ಸಲಹೆ ನೀಡಿದ್ದರು. ಅದನ್ನು ಡಿಕೆಶಿ ಪಾಲಿಸಿದ್ದರು ಕೂಡಾ. ತಮ್ಮ ರಾಜಕೀಯ ಬೆಳವಣಿಗೆಯಲ್ಲಿ ಅಜ್ಜಯ್ಯನ ಆಶೀರ್ವಾದ ದೊಡ್ಡದು ಎಂದು ಡಿಕೆಶಿ ನಂಬುತ್ತಾರೆ. ಹೀಗಾಗಿ ತಮ್ಮ ಕಚೇರಿಯಲ್ಲೇ ಅವರ ಫೋಟೋ ಹಾಕಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಿಕೆ ಶಿವಕುಮಾರ್ ಸಂಪುಟದಲ್ಲಿ ಯಾರೆಲ್ಲಾ ಸಚಿವರಿರುತ್ತಾರೆ: ಪಟ್ಟಿ ಇಲ್ಲಿದೆ