Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ನವದೆಹಲಿ: ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ವರದಿ ನೀಡಲು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ದೆಹಲಿಗೆ ತೆರಳಿದ್ದರು.
ಸುಮಾರು 45 ನಿಮಿಷಗಳ ಕಾಲ ರಾಹುಲ್ ಜೊತೆ ಸಮಾಲೋಚನೆ ನಡೆಸಿದ ಡಿಕೆಶಿ ಬಳಿಕ ರಾಹುಲ್ ಜೊತೆಗೆ ಸುಂದರ ಸೆಲ್ಫೀಯೊಂದಕ್ಕೆ ಪೋಸ್ ನೀಡಿದರು.
ಪದಾದಿಕಾರಿಗಳ ನೇಮಕ, ಇತ್ತೀಚೆಗೆ ಸಿಎಂ ಕುರ್ಚಿಗಾಗಿ ನಡೆಯುತ್ತಿರುವ ಮಾತಿನ ಸಮರದ ಕುರಿತು ರಾಹುಲ್ ಗೆ ಡಿಕೆಶಿ ವರದಿ ನೀಡಿದ್ದಾರೆ ಎನ್ನಲಾಗಿದೆ. ಜಮೀರ್ ಅಹಮ್ಮದ್ ಬಹಿರಂಗ ಹೇಳಿಕೆ ಬಗ್ಗೆ ವಿಶೇಷವಾಗಿ ರಾಹುಲ್ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ.