ದೆಹಲಿಗೆ ಹೋಗಿ ಬಂದ ಡಿಕೆ ಶಿವಕುಮಾರ್ ದಿಡೀರ್ ಆಗಿ ಕೈಗೊಂಡ ಆ ನಿರ್ಧಾರವೇನು

Krishnaveni K
ಮಂಗಳವಾರ, 20 ಜನವರಿ 2026 (10:01 IST)
ಬೆಂಗಳೂರು: ಹೈಕಮಾಂಡ್ ಭೇಟಿಗೆ ದೆಹಲಿಗೆ ಹೋಗಿ ಬಂದಿದ್ದ ಡಿಕೆ ಶಿವಕುಮಾರ್ ದಿಡೀರ್ ಆಗಿ ಒಂದು ತೀರ್ಮಾನ ಕೈಗೊಂಡು ಎಲ್ಲರನ್ನೂ ಅಚ್ಚರಿಗೆ ದೂಡಿದ್ದಾರೆ.

ಡಿಸಿಎಂ ಡಿಕೆ ಶಿವಕುಮಾರ್ ರಾಜ್ಯ ರಾಜಕೀಯದ ಬಗ್ಗೆ ಚರ್ಚೆ ನಡೆಸಲು ದೆಹಲಿಗೆ ಹೋಗಿ ಎರಡು ದಿನ ಅಲ್ಲೇ ಮೊಕ್ಕಾಂ ಹೂಡಿದ್ದರು. ಆದರೆ ದೆಹಲಿಯಲ್ಲಿ ಏನು ಮಾತುಕತೆಯಾಗಿದೆ, ಅಂದುಕೊಂಡಂತೇ ರಾಹುಲ್ ಗಾಂಧಿ ಭೇಟಿಯಾಗಿ ಮಾತನಾಡಿದ್ದಾರಾ ಎಂಬುದನ್ನು ಅವರು ಖಚಿತವಾಗಿ ಹೇಳಿಲ್ಲ.

ಆದರೆ ದೆಹಲಿ ಭೇಟಿ ಗದ್ದಲದ ನಡುವೆ ಡಿಕೆ ಶಿವಕುಮಾರ್ ದಾವೋಸ್ ನಲ್ಲಿ ನಡೆಯುವ ಆರ್ಥಿಕ ಸಮ್ಮೇಳನದಲ್ಲಿ ಭಾಗಿಯಾಗಲ್ಲ ಎನ್ನಲಾಗಿತ್ತು. ಇದರ ಬಗ್ಗೆ ವಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಭಾರೀ ಟೀಕೆ ಮಾಡಿತ್ತು. ಇದರಿಂದಾಗಿ ಕರ್ನಾಟಕಕ್ಕೆ ದೊಡ್ಡ ಅವಕಾಶ ಕೈತಪ್ಪಿ ಹೋಯ್ತು ಎಂದು ಬಿವೈ ವಿಜಯೇಂದ್ರ ಹೇಳಿದ್ದರು.

ಆದರೆ ಈಗ ದೆಹಲಿಯಿಂದ ಬಂದ ಬಳಿಕ ಡಿಕೆ ಶಿವಕುಮಾರ್ ದಿಡೀರ್ ನಿರ್ಧಾರ ಬದಲಾಯಿಸಿಕೊಂಡಿದ್ದಾರೆ. ದಾವೋಸ್ ಗೆ ಭೇಟಿ ನೀಡಲು ನಿರ್ಧರಿಸಿದ್ದಾರೆ. ಇಂದೇ ಅವರು ದಾವೋಸ್ ಗೆ ಪ್ರಯಾಣ ಬೆಳೆಸಲಿದ್ದಾರೆ ಎನ್ನಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಬ್ಬ ಈ ವಿಡಿಯೋ ನೋಡುವಾಗ ಎದೆ ಝಳ್ ಎನಿಸುತ್ತದೆ: ಜಿಪ್‌ಲೈನ್ ಆಡುವಾಗ ತುಂಡಾದ ಹಗ್ಗ, 40 ಅಡಿ ಎತ್ತರದಿಂದ ಬಿದ್ದ ಯುವಕ

ಪತ್ನಿ ಚೆನ್ನಮ್ಮ ನಿಧನ: ಡಿ ದೇವೇಗೌಡ ಜತೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ

ಅಹಮದಾಬಾದ್ ಪಟಾಕಿ ಕಾರ್ಖಾನೆಯಲ್ಲಿ ಬೆಂಕಿ ಅವಘಡ: ಮೃತರ ಕುಟುಂಬಕ್ಕೆ ಮೋದಿ ಪರಿಹಾರ ಘೋಷಣೆ

ಟಿಎಂಸಿ ಬಿಟ್ಟು ಹೋದವರು ಮತ್ತೇ ವಾಪಾಸ್ ಬಂದ್ರೆ ನಾನು ರಾಜೀನಾಮೆ ಕೊಡ್ತೇನೆ: ಅಭಿಷೇಕ್ ಬ್ಯಾನರ್ಜಿ

ಚೆನ್ನಮ್ಮರ ಮೇಲೆ ದೇವೇಗೌಡರ ಕುಟುಂಬದ ಸದಸ್ಯನಿಂದಲೇ ನಡೆದಿದ್ದು ಆ್ಯಸಿಡ್ ದಾಳಿ, ಎಲ್ಲಿ, ಯಾವಾಗ ಗೊತ್ತಾ

ಮುಂದಿನ ಸುದ್ದಿ
Show comments