Publish Date: Fri, 31 Dec 2021 (08:35 IST)
Updated Date: Fri, 31 Dec 2021 (08:48 IST)
ಬೆಂಗಳೂರು: ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಸದಸ್ಯತ್ವ ಪಡೆದುಕೊಂಡಿದ್ದಾರೆ.
ರಾಜಕೀಯಕ್ಕೆ ಬರುವ ಮೊದಲು ಚಿತ್ರರಂಗದಲ್ಲಿ ಪ್ರದರ್ಶಕನಾಗಿ ಕೆಲಸ ಮಾಡಿದ್ದ ಡಿಕೆಶಿ ಕೆಲವು ಕಾಲ ಮಂಡಳಿಯ ಸದಸ್ಯರಾಗಿದ್ದರು. ರಾಜಕೀಯದಲ್ಲಿ ಸಕ್ರಿಯರಾದ ನಂತರ ಚಿತ್ರರಂಗದಿಂದ ದೂರವೇ ಉಳಿದರು.
ಇದೀಗ ಮತ್ತೆ ವಿತರಕನಾಗಿ ಕೆಲಸ ಮಾಡುತ್ತಿದ್ದ ವಾಣಿಜ್ಯ ಮಂಡಳಿಗೆ ತೆರಳಿ ಸದಸ್ಯತ್ವ ಪಡೆದುಕೊಂಡಿದ್ದಾರೆ. ಬಳಿಕ ಮೇಕೆದಾಟು ಹೋರಾಟಕ್ಕೆ ಕನ್ನಡ ಚಲನಚಿತ್ರರಂಗದ ಬೆಂಬಲವನ್ನೂ ಕೋರಿದ್ದಾರೆ.