Webdunia - Bharat's app for daily news and videos

Install App

ಸಿಎಂ ಆಗುವುದಕ್ಕಿಂತಲೂ ಡಿಕೆ ಶಿವಕುಮಾರ್ ಗೆ ಎದುರಾಗಿದೆ ದೊಡ್ಡ ತಲೆನೋವು

ಕೃಷ್ಣವೇಣಿ ಕೆ
ಸೋಮವಾರ, 1 ಜೂನ್ 2026 (11:28 IST)
ಬೆಂಗಳೂರು: ಸಿಎಂ ಆಗುವುದೇನೋ ಸುಲಭವಾಗಿ ನಡೆದು ಹೋಯಿತು. ಆದರೆ ಮುಂದಿನ ಹಂತವೇ ಡಿಕೆ ಶಿವಕುಮಾರ್ ಗೆ ದೊಡ್ಡ ತಲೆನೋವಾಗಿದೆ. ಈ ಬಗ್ಗೆ ಇಲ್ಲಿದೆ ವಿವರ.

ಹೈಕಮಾಂಡ್ ಸೂಚನೆ ಮೇರೆಗೆ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದರು. ಇದಾದ ಬಳಿಕ ಕಾಂಗ್ರೆಸ್ ಹೈಕಮಾಂಡ್ ಸೂಚನೆ ಮೇರೆಗೆ ಶಾಸಕಾಂಗ ಸಭೆ ನಡೆಸಿ ಡಿಕೆ ಶಿವಕುಮಾರ್ ಮುಂದಿನ ಸಿಎಂ ಎಂದು ಘೋಷಣೆಯೂ ಆಗಿದೆ.

ಆದರೆ ಇದಾದ ಬಳಿಕ ಡಿಕೆಶಿ ಹಾದಿ ದುರ್ಗಮವಾಗಿದೆ. ಯಾಕೆಂದರೆ ಹೊಸ ಕ್ಯಾಬಿನೆಟ್ ಎಂದ ತಕ್ಷಣ ಸಚಿವಾಕಾಂಕ್ಷಿಗಳ ಪಟ್ಟಿಯೂ ಹನುಮಂತನ ಬಾಲದಂತೆ ದೊಡ್ಡದಾಗಿದೆ. ಹಳಬರು, ಹೊಸಬರು ನಮಗೆ ಮಂತ್ರಿಗಿರಿ ಕೊಡಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಯಾರಿಗೇ ನೀಡದೇ ಇದ್ದರೂ ಅಸಮಾಧಾನ ಸರ್ಕಾರಕ್ಕೇ ಕಂಟಕ ತಂದಿಡಬಹುದು. ಹೀಗಾಗಿ ನಿಭಾಯಿಸುವುದು ಡಿಕೆಶಿ ಪಾಲಿಗೆ ದೊಡ್ಡ ಸವಾಲಾಗಿದೆ. ಇದೇ ಕಾರಣಕ್ಕೆ ಯಾರಿಗೆಲ್ಲಾ ಸಚಿವ ಸ್ಥಾನ ಕೊಡಬೇಕು ಎಂದು ಹೈಕಮಾಂಡ್ ನಾಯಕರೇ ತೀರ್ಮಾನಿಸಲಿದ್ದಾರೆ. ಈ ಕಾರಣಕ್ಕೆ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಇಂದು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಅಲ್ಲಿಯೇ ಎಲ್ಲವೂ ತೀರ್ಮಾನವಾಗಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಶೆಮುಕ್ತ ರಾಜ್ಯವನ್ನಾಗಿಸುವ ಸಿಎಂ ಆಶಯವನ್ನು ಸಾಕಾರಗೊಳಿಸುವ ಜವಾಬ್ದಾರಿ ಪೊಲೀಸ ಇಲಾಖೆ ಮೇಲಿದೆ

ನಾಗೇಂದ್ರ ರಾಜೀನಾಮೆ ನೀಡುವವರೆಗೆ ಅಧಿವೇಶನ ನಡೆಯಲು ಅವಕಾಶ ನೀಡಲ್ಲ: ಆರ್‌ ಅಶೋಕ್ ಎಚ್ಚರಿಕೆ

ದೇಶಕ್ಕೆ ಭ್ರಷ್ಟಚಾರವನ್ನು ಪರಿಚಯಿಸಿದ್ದೆ ಕಾಂಗ್ರೆಸ್‌

ಭಾರೀ ಕುತೂಹಲ ಮೂಡಿಸಿದ ಮೈಸೂರಲ್ಲಿ ಸಚಿವ ಸ್ಥಾನ ವಂಚಿತರ ದಿಢೀರ್ ಸಭೆ

ಊಟಕ್ಕೆಂದು ಕರೆದುಕೊಂಡು ಹೋಗಿ ಮಕ್ಕಳಿಬ್ಬರ ಜೀವವನ್ನೇ ತೆಗೆದ ತಂದೆ, ಬೆಂಗಳೂರಿನ ಐಷರಾಮಿ ಹೊಟೇಲ್‌ನಲ್ಲಿ ಆಗಿದ್ದೇನು

ಮುಂದಿನ ಸುದ್ದಿ
Show comments