Select Your Language

Notifications

webdunia
webdunia
webdunia
webdunia

ತಾಕತ್ತಿನ ಬಗ್ಗೆ ಪ್ರಶ್ನಿಸಿದ ಮುನಿರತ್ನಗೆ ನೀ ರೇಪಿಸ್ಟ್ ಎಂದು ಡಿಕೆ ಶಿವಕುಮಾರ್ ಕೌಂಟರ್: ಸದನದಲ್ಲಿ ಗದ್ದಲ

DK Shivakumar-Munirathna
ಬೆಂಗಳೂರು: ವಿಧಾನಸಭೆ ಅಧಿವೇಶನದಲ್ಲಿ ಇಂದು ಬಿಜೆಪಿ ಶಾಸಕ ಮುನಿರತ್ನ ನಿಮಗೆ ತಾಕತ್ತಿದ್ದರೆ ಎಂದು ಹೇಳಿದ್ದಕ್ಕೆ ಸಿಟ್ಟಾದ ಡಿಸಿಎಂ ಡಿಕೆ ಶಿವಕುಮಾರ್ ನೀನು ರೇಪಿಸ್ಟ್ ಎಂದು ಕೌಂಟರ್ ಕೊಟ್ಟಿದ್ದು ಕೋಲಾಹಲವೇ ಉಂಟಾಗಿದೆ.

ಇಂದು ಸದನದಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಬೆಂಗಳೂರು ಅಭಿವೃದ್ಧಿ ಬಗ್ಗೆ ಮುನಿರತ್ನ ಮಾತನಾಡುತ್ತಿದ್ದರು. ಈ ವೇಳೆ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ತಾಕತ್ತಿದ್ದರೆ ಎಂದು ಹೇಳಲು ಹೊರಟರು. ಇದು ಡಿಕೆಶಿ ಸಿಟ್ಟಿಗೆ ಕಾರಣವಾಯ್ತು.

ನನ್ನ ತಾಕತ್ತು, ಧಮ್ ಬಗ್ಗೆಯೇ ಮಾತನಾಡುತ್ತಾನೆ. ನೀನು ರೇಪಿಸ್ಟ್, ನಿನ್ನ ಕೇಸ್ ಗಳ ಹಿಸ್ಟರಿ ಹೇಳಲು ಹೊರಟರೆ ಇಲ್ಲಿ ಸಾಕಾಗಲ್ಲ ಎಂದು ಕೌಂಟರ್ ಕೊಟ್ಟರು. ಇದರಿಂದ ಈ ವಾಗ್ವಾದ ವೈಯಕ್ತಿಕ ಮಟ್ಟಕ್ಕೆ ಇಳಿಯಿತು. ಈ ವೇಳೆ ಮುನಿರತ್ನ ಪರ ವಿಪಕ್ಷ ನಾಯಕ ಆರ್ ಅಶೋಕ್ ಮಾತನಾಡಿದರೆ ಇತ್ತ ಕಾಂಗ್ರೆಸ್ ಶಾಸಕರು ಡಿಕೆಶಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಸದನದ ಬಾವಿಗಳಿದು ಘೋಷಣೆಗಳನ್ನು ಕೂಗಿದರು.

ಇದರಿಂದ ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು. ಇದರಿಂದ ಸಿಟ್ಟಿಗೆದ್ದ ಸ್ಪೀಕರ್ ಯುಟಿ ಖಾದರ್ ಆಡಳಿತ ಪಕ್ಷದ ಸದಸ್ಯರ ಮೇಲೆ ಕೂಗಾಡಿದರು. ಎಷ್ಟು ಬೊಬ್ಬೆ ಹೊಡೆಯುತ್ತೀರೋ ಹೊಡೆಯಿರಿ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

Gold Price today: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ