Webdunia - Bharat's app for daily news and videos

Install App

ಸಿಎಂ ಕುರ್ಚಿ ಪಡೆಯಲು ಡಿಕೆ ಶಿವಕುಮಾರ್ ಬಣದ ಮತ್ತೊಂದು ಪವರ್ ಫುಲ್ ಐಡಿಯಾ

Krishnaveni K
ಸೋಮವಾರ, 24 ನವೆಂಬರ್ 2025 (11:13 IST)
ಬೆಂಗಳೂರು: ಸಿಎಂ ಕುರ್ಚಿಗಾಗಿ ನಡೆಯುತ್ತಿರುವ ಫೈಟ್ ನಡುವೆ ಡಿಕೆ ಶಿವಕುಮಾರ್ ಬಣ ಮತ್ತೊಂದು ಪವರ್ ಫುಲ್ ಐಡಿಯಾ ಮಾಡಿದೆ ಎನ್ನಲಾಗುತ್ತಿದೆ.

ಮಲ್ಲಿಕಾರ್ಜುನ ಖರ್ಗೆ ಇಂದು ರಾಜ್ಯ ನಾಯಕರ ಸಂದೇಶ ಹೊತ್ತು ದೆಹಲಿಗೆ ಮರಳಲಿದ್ದಾರೆ. ನಾಳೆ ಅವರು ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿ ರಾಜ್ಯದ ಪ್ರಸ್ತುತ ವಿದ್ಯಮಾನಗಳ ಬಗ್ಗೆ ವಿವರಣೆ ನೀಡಲಿದ್ದಾರೆ. ಇದೀಗ ರಾಹುಲ್ ಗಾಂಧಿಯೇ ನೇರವಾಗಿ ರಾಜ್ಯದ ನಾಯಕತ್ವ ವಿವಾದ ಬಗೆಹರಿಸಲು ಮುಂದಾಗಲಿದ್ದಾರೆ.

ಇದರ ನಡುವೆ ಸಿಎಂ ಹುದ್ದೆಗಾಗಿ ಪಟ್ಟು ಹಿಡಿದಿರುವ ಡಿಕೆಶಿ ಬಣ ಹೊಸ ದಾಳ ಉರುಳಿಸಿದೆ. ಹೊಸ ಶಾಸಕಾಂಗ ನಾಯಕನ ಆಯ್ಕೆಯಾಗಲೇ ಬೇಕು. ಅಧಿಕಾರ ಹಂಚಿಕೆ ಈ ಮೊದಲೇ ಒಪ್ಪಂದವಾದಂತೆ ನಡೆಯಲೇಬೇಕು. ಅದಕ್ಕಾಗಿ ಗೌಪ್ಯ ಮತದಾನವಾಗಲಿ ಎಂದು ಬೇಡಿಕೆ ಮುಂದಿಟ್ಟಿದೆ ಎನ್ನಲಾಗಿದೆ.

ಇಂದು ಡಿಕೆಶಿ ಬೆಂಬಲಿತ ಮತ್ತೊಂದು ಬಣ ದೆಹಲಿಗೆ ತೆರಳಿದೆ. ಗೌಪ್ಯ ಮತದಾನದ ಮೂಲಕ ಶಾಸಕರ ಬೆಂಬಲ ಪಡೆಯಲು ಡಿಕೆಶಿ ಬಣ ಮುಂದಾಗಿದೆ. ಇದರಿಂದ ಹೆಚ್ಚು ಶಾಸಕರ ಬೆಂಬಲ ಸಿಗಬಹುದು ಎಂಬ ನಿರೀಕ್ಷೆ ಡಿಕೆಶಿ ಬಣದ್ದು. ಡಿಕೆಶಿಗೆ ಹೆಚ್ಚು ಬಣದ ಶಾಸಕರ ಬೆಂಬಲ ಸಿಕ್ಕರೆ ಅನಿವಾರ್ಯವಾಗಿ ಸಿಎಂ ಬದಲಾವಣೆ ಮಾಡಬೇಕಾಗಬಹುದು. ಇದು ಸದ್ಯದ ಲೆಕ್ಕಾಚಾರವೆನ್ನಲಾಗುತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಯುಪಿಐ ವಹಿವಾಟಿಗೆ ಶುಲ್ಕ ವಿಧಿಸಿದ ಕೇಂದ್ರ: ಇದು ನಂಬಿಕೆ ದ್ರೋಹ ಎಂದ ರಣದೀಪ್ ಸುರ್ಜೇವಾಲ

ಅಲ್ಲೇ ಬಟ್ಟೆ ತೆಗಿ, ಸೆಲ್ಫೀ ಹೊಡಿ.. ಹೋಟೆಲ್ ಬಾಲ್ಕನಿಯಲ್ಲಿ ಮಹಿಳೆಯ ಅಸಭ್ಯ ವರ್ತನೆ: ವೈರಲ್ ಆದ video

ನನಗೆ ಮುಸ್ಲಿಮರೇ ಫಸ್ಟ್ ಎಂದ ತುಳು ಕಾಮಿಡಿ ನಟ ಅರವಿಂದ್ ಬೋಳಾರ್: ನೀವು ಯಾವ ಸೀಮೆ ಹಿಂದೂ ಎಂದು ನೆಟ್ಟಿಗರ ತರಾಟೆ Video

ಕರ್ತವ್ಯಕ್ಕೂ ಮೀರಿದ ಸೇವೆ: ಬೆಂಗಳೂರಿನಲ್ಲಿ ಮಳೆ ನೀರಿನ ನಡುವೆ ನೆರವಿಗೆ ನಿಂತ ಟ್ರಾಫಿಕ್ ಪೊಲೀಸ್ Video

BRICS ನಾಯಕರ ಭದ್ರತೆಗೆ ನಿಯೋಜಿಸಿದರೆ ಶಾರ್ಪ್ ಶೂಟರ್ ಇಂಥಾ ಕೆಲಸ ಮಾಡೋದಾ: ಏಕ್ ದಂ ಸಸ್ಪೆಂಡ್

ಮುಂದಿನ ಸುದ್ದಿ
Show comments