Publish Date: Wed, 11 May 2022 (19:40 IST)
Updated Date: Wed, 11 May 2022 (19:45 IST)
ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣ ಸಂಬಂಧ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಸೆಂಟ್ರಲ್ ಜೈಲು ಸೇರಿದ್ದಾಳೆ..ಸಿಐಡಿ ಕಸ್ಟಡಿ ಅಂತ್ಯ ಹಿನ್ನಲೆ ಕಲಬುರಗಿ ಸೆಂಟ್ರಲ್ ಜೈಲಿಗೆ ಕಳುಹಿಸಿದ್ದು, ಅಕ್ರಮದಲ್ಲಿ ಭಾಗಿಯಾಗಿ ಪತಿ, ಪತ್ನಿ ಜೈಲು ಪಾಲಾಗಿದ್ದಾರೆ..ಸೆಂಟ್ರಲ್ ಜೈಲಿನಲ್ಲಿ ಪತಿ ರಾಜೇಶ್ನನ್ನು ನೋಡ್ತಿದ್ದ ಹಾಗೆಯೇ ದಿವ್ಯಾ ಹಾಗರಗಿ ಕುಸಿದು ಬಿದ್ದಿದ್ದಾಳೆ..ದಿವ್ಯಾ ಹಾಗರಗಿಯನ್ನ ಸಿಂಗಲ್ ಮಹಿಳಾ ಬ್ಯಾರಕ್‌ನಲ್ಲಿ ಇರಿಸಲಾಗಿದೆ..
ಜ್ಞಾನಜ್ಯೋತಿ ಶಾಲೆಯ ಶಿಕ್ಷಕರ ಮಹಿಳಾ ಬ್ಯಾರಕ್‌ನಲ್ಲಿ ತನ್ನ ಶಾಲೆಯ ಶಿಕ್ಷಕರು ಇದ್ದಾರೆ..ನನ್ನನ್ನು ಅಲ್ಲೇ ಕಳುಹಿಸಿ ಎಂದು ದಿವ್ಯಾ ಹಾಗರಗಿ ಪಟ್ಟು ಹಿಡಿದಿದ್ಲು..ಆದ್ರೆ ಜೈಲು ಸಿಬ್ಬಂದಿ ದಿವ್ಯಾಳ ಯಾವ ಬೇಡಿಕೆಯನ್ನ ಪೂರೈಸೋದಕ್ಕೆ ಆಗೋದಿಲ್ಲ ಎಂದು ಪ್ರತ್ಯೇಕ ಬ್ಯಾರಕ್‌ನಲ್ಲಿ ಹಾಕಿ ಲಾಕ್ ಮಾಡಿದ್ದಾರೆ.