ಸಾಗರ ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದಿದೆ.. ಸಾಗರ ಬಿಜೆಪಿಯ ನೊಂದ ಕಾರ್ಯಕರ್ತರು ಸಭೆ ನಡೆಸಿದ್ದು, ಈ ಸಭೆಯಲ್ಲಿ ಸಂಘ ಪರಿವಾರದ ಮುಖಂಡರಿಂದ ಖಂಡನೆ ವ್ಯಕ್ತವಾಗಿದೆ. RSS ಮೂಲದ ಪದ್ಮನಾಭ ಭಟ್ ಶಾಸಕರು ಹಾಗೂ ಕೆಲವು RSS ಕಾರ್ಯಕರ್ತರ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. MLA ಆದ ತಕ್ಷಣ, ಮಂತ್ರಿ ಆದ ತಕ್ಷಣ ಸಂಘದವರು ಮಾತನಾಡುವುದಿಲ್ಲ. MLA ಆದ ತಕ್ಷಣ, ಮಂತ್ರಿ ಆದ ಮೇಲೆ ಸಂಘದವರು ಅವರ ಬಾಲ ಹಿಡಿದು ಹೋಗುತ್ತಾರೆ. ಇದು ತಪ್ಪು. ನಮಗೂ ಸ್ವಾಭಿಮಾನ ಇದೆ. ಬಕೆಟ್ ಹಿಡಿದು ಹೋಗುವುದಿಲ್ಲ ಎಂದು ಅಸಮಾಧಾನ ಹೊರಹಾಕಿದ್ರು.. ಶಾಸಕ ಹರತಾಳು ಹಾಲಪ್ಪಗೆ ಮುಂಬರುವ ಚುನಾವಣೆಯಲ್ಲಿ ಟಿಕೆಟ್ ನೀಡದಂತೆ BJP ಮುಖಂಡರು ಹಾಗೂ ಸಂಘ ಪರಿವಾರದ ಮುಖಂಡರು ಪಟ್ಟು ಹಿಡಿದಿದ್ದಾರೆ.. ಹರತಾಳು ಹಾಲಪ್ಪ ಸಾಗರದಲ್ಲಿ ಶಾಸಕರಾದ ಬಳಿಕ ಗೂಂಡಾಗಿರಿ ಹೆಚ್ಚಾಗಿದೆ.. ಶಾಸಕರ ಬೆಂಬಲಿಗರ ಗೂಂಡಾಗಿರಿ ಮಿತಿಮೀರಿದೆ.. BJP ಮುಖಂಡರ ಮೇಲೆಯೇ ಹಲ್ಲೆ ನಡೆಸಲಾಗುತ್ತಿದೆ.
ಜೊತೆಗೆ ಸಂಘ ಪರಿವಾರದ ಮುಖಂಡರಿಗೆ ಧಮಕಿ ಹಾಕಲಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ರು.. ಹಾಲಪ್ಪ ಹೊರತುಪಡಿಸಿ ಯಾರಿಗೇ ಪಕ್ಷದ ಟಿಕೆಟ್ ನೀಡಿದರೂ ಗೆಲ್ಲಿಸಿಕೊಂಡು ಬರುತ್ತೇವೆ ಎಂದು BJP ಮುಖಂಡರು ಹಾಗೂ ಸಂಘ ಪರಿವಾರದ ಮುಖಂಡರು ತಿಳಿಸಿದ್ದಾರೆ.