ಪ್ರಿಯಾಂಕ್ ಖರ್ಗೆ ಭೇಟಿ ವಿಚಾರವಾಗಿ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.ಪ್ರಣಾಳಿಕೆಯಲ್ಲಿ ಭರವಸೆ ಕೊಟ್ಟ ವಿಚಾರವಾಗಿ ಚರ್ಚೆ ಮಾಡಿದ್ವಿ.ಬೆಂಗಳೂರಿನ ಒಂದಷ್ಟು ಕಾರ್ಯಕ್ರಮ ಬಗ್ಗೆ ಚರ್ಚೆ ಮಾಡಿದ್ವಿ.ಬೆಂಗಳೂರಿನಲ್ಲಿ ವೈಪೈ ಜೋನ್ ಮಾಡ್ತಾ ಇದ್ದೇವೆ.ಫೇಕ್ ನ್ಯೂಸ್ ತಡೆಯಲು ಕಾನೂನು ತರುತ್ತಿದ್ದೇವೆ.ಗೃಹ ಇಲಾಖೆಯಿಂದ ಈ ಕಾನೂನು ಆಗುತ್ತೆ.ಕೆಲ ಸುಳ್ಳು ಸುದ್ದಿಗಳನ್ನು ಹರಿಬಿಡಲಾಗುತ್ತಿದೆ.ಕೆಲ ನಾಯಕರ ಬಗ್ಗೆ ತೇಜೋವದೆ ಮಾಡಲಾಗುತ್ತಿದೆ.ಶೀಘ್ರದಲ್ಲೇ ಕಾನೂನು ತರುತ್ತೇವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
೪೦% ಕಮಿಷನ್ ಆರೋಪ ಹಾಗೂ ಕೋವಿಡ್ ಹಗರಣ ತನಿಖೆಗೆ ವಹಿಸಿದ ವಿಚಾರವಾಗಿ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು,ಈಗಾಗಲೇ ತನಿಖೆಗೆ ಕೊಟ್ಟಿದ್ದೇವೆ.ನಾನು ಈ ಬಗ್ಗೆ ಮಾತನಾಡಲ್ಲ, ಯಾರು ಮಾತನಾಡಬೇಕೋ ಅವರು ಮಾತನಾಡುತ್ತಾರೆ ಎಂದು ಡಿಕೆಶಿವಕುಮಾರ್ ಹೇಳಿದ್ದಾರೆ.