Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಯುವನಿಧಿ ನೋಂದಣಿಗೆ ನಿರುತ್ಸಾಹ

YUVANIDI SCHEME

geetha

bangalore , ಮಂಗಳವಾರ, 9 ಜನವರಿ 2024 (15:23 IST)
ಬೆಂಗಳೂರು-ರಾಜ್ಯ ಕಾಂಗ್ರೆಸ್‌ ಸರಕಾರದ ಮಹತ್ವಾಕಾಂಕ್ಷಿ 5 ಗ್ಯಾರಂಟಿಗಳಲ್ಲಿ ಕೊನೆಯದಾದ ಯುವನಿಧಿಗೆ ನಿರುದ್ಯೋಗಿಗಳ ನೋಂದಣಿ ಆರಂಭವಾಗಿದೆ. ಎಲ್ಲಾ ಜಿಲ್ಲೆಯಲ್ಲೂ ಕಳೆದ 12 ದಿನಗಳಿಂದ ನೋಂದಣಿ ಕಾರ್ಯ ನಡೆಯುತ್ತಿದೆ.
ಇನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ನಿನ್ನೆವರೆಗೂ 743 ನಿರುದ್ಯೋಗಿಗಳು ಅರ್ಜಿ ನೋಂದಾಯಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ 2023ರಲ್ಲಿ ಪದವಿ ಅಥವಾ ಡಿಪ್ಲೊಮಾ ತೇರ್ಗಡೆಯಾದ ಇನ್ನೂ ಕೆಲಸಕ್ಕೆ ಸೇರದ, ಸ್ವಯಂ-ಉದ್ಯೋಗವಿಲ್ಲದ ಅಥವಾ ಬೇರೆ ಕೋರ್ಸ್‌ಗಳಿಗೆ ದಾಖಲಾಗದ ನಿರುದ್ಯೋಗಿಗಳು ಯೋಜನೆಯ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ 4 ತಾಲೂಕುಗಳಲ್ಲಿ ಸರಕಾರಿ, ಖಾಸಗಿ ಸೇರಿದಂತೆ ಅನೇಕ ಪದವಿ ಹಾಗೂ ಡಿಪ್ಲೊಮಾ ಕಾಲೇಜುಗಳಿವೆ. ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳು ಕಾಲೇಜುಗಳಿಂದ ತೇರ್ಗಡೆ ಹೊಂದುತ್ತಾರೆ. 2023ರಲ್ಲೂಅನೇಕ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಇವರಲ್ಲಿಅನೇಕರಿಗೆ ಯುವನಿಧಿ ಸೌಲಭ್ಯ ಪಡೆಯಲು ಅವಕಾಶವಿದೆ. ಡಿ.26 ರಿಂದ ಜ. 8 ರವರೆಗೆ ಒಟ್ಟು 743 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪರಿಶಿಷ್ಟ ಸಮುದಾಯಕ್ಕೆ DCM ಹುದ್ದೆ ಗ್ಯಾರಂಟಿ?