BMRCLನಿಂದ ನಿರ್ಮಾಣಗೊಂಡಿರೋ ರಸ್ತೆ ತಡೆಗೋಡೆ ಕುಸಿತವಾದ ಹಿನ್ನೆಲೆ, ಶಾಸಕ ದಿನೇಶ್ ಗುಂಡೂರಾವ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಪ್ರತಿಕ್ರಿಯೆ ನೀಡಿದ ಅವರು, ಬೆಂಗಳೂರಿನಲ್ಲಿ ದಿನನಿತ್ಯ ಮಳೆ ಬರ್ತಿದೆ. ಇಷ್ಟೊಂದು ಮಳೆ ಆಗ್ತಿರೋದನ್ನ ನಾವು ನೋಡಿರ್ಲಿಲ್ಲ. ಮೆಟ್ರೋದವರು ಕಾಂಪೌಂಡ್ ಹಾಕಿದ್ರು ಸಹ ಈ ಅನಾಹುತ ಆಗಿದೆ, ಈ ವೇಳೆ ಸದ್ಯ ಯಾರು ಇರ್ಲಿಲ್ಲ. ಏನು ನಷ್ಟ ಆಗಿದೆ ಅದನ್ನ ಸರ್ಕಾರ ಭರಿಸಬೇಕು. ಸುರಕ್ಷತಾ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಸದ್ಯ ಯಾರಿಗೂ ಏನು ಅಪಾಯ ಆಗಲಿಲ್ಲ. ಕಾಂಪೌಂಡ್ ಒಳಗೆ ನೋಡಿರ್ಲಿಲ್ಲ. ಕಾಮಗಾರಿ ಬಗ್ಗೆ ಪರಿಶೀಲನೆ ಆಗಲಿದೆ. ಇದು ಸರಿಯಾಗಿ ನೋಡಿ ವಾಲ್ ಮಾಡಬೇಕಿತ್ತು. ತೊಂದರೆ ಆದವರಿಗೆ ಪರಿಹಾರ ಕೊಡ್ತೀವಿ. ಇನ್ಸೂರೆನ್ಸ್ ಹೊರತು ಪಡಿಸಿ ಏನ್ ಪರಿಹಾರ ಕೊಡ್ಬೇಕು ಅದನ್ನ ಕೊಡ್ತೀವಿ. ಸರ್ಕಾರ ಇದನ್ನ ಗಂಭೀರವಾಗಿ ಪರಿಗಣಿಸಬೇಕು. ಕಳಪೆ ಕಾಮಗಾರಿಯ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದರು.