Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ರಾಜಧಾನಿಯಲ್ಲಿದೆ ವಿಭಿನ್ನವಾದ ಮನೆ

ರಾಜಧಾನಿಯಲ್ಲಿದೆ ವಿಭಿನ್ನವಾದ ಮನೆ
bangalore , ಗುರುವಾರ, 11 ಆಗಸ್ಟ್ 2022 (20:11 IST)
ಮನೆ ಖಾಲಿ ಮಾಡ್ಬೇಕಾದ್ರೆ ನಾವು ನೀವೆಲ್ಲ ಒಂದು ಕಡೆಯಿಂದ ಇನ್ನೊಂದು‌ ಕಡೆ ಮನೆಲಿರುವ ವಸ್ತುಗಳನ್ನು ಶಿಫ್ಟ್ ಮಾಡ್ತಿವಿ.. ಆದರೆ ರಾಜಧಾನಿಯಲ್ಲಿದೆ ವಿಭಿನ್ನವಾದ ಮನೆ. ಹೌದು ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಮನೆ  ಶಿಫ್ಟ್ ಮಾಡಲಾಗಿದೆ.  ಈ ಶಿಫ್ಟ್ ಆದ ಮನೆ ಸುಮಾರು 30 ವರ್ಷದ ಹಳೆಯ ಇತಿಹಾಸವನ್ನು  ಹೊಂದಿರುವ ಮನೆ. 
 
ರಾಜಧಾನಿ ಬೆಂಗಳೂರಿನಲ್ಲಿ ಹಳೆ ಕಾಲದ ಬಿಲ್ಡಿಂಗ್ ಯಿಂದ ವ್ಯರ್ಥವಾದ ಕಲ್ಲಿನಿಂದ ಈ ಮನೆಯ ತಯಾರಿ ಮಾಡಲಾಗಿದ್ದು. ಶಂಕರಮಠದಿಂದ ವಿಜಯ ನಗರದ ಇನ್ ಕಂ ಟ್ಯಾಕ್ಸ್ ಲೇಔಟ್ ಗೆ ಮನೆ ಸ್ಥಳಾಂತರಿಸಲಾಗಿದೆ. ಇಟ್ಟಿಗೆ ಗೋಡೆ ಸಾಮಾನ್ಯವಾಗಿ 9 ಇಂಚು ಇದ್ದು,  ಕಾಂಕ್ರೀಟ್ ಯಿಂದ ಕಟ್ಟಲಾಗಿದೆ.‌ ಭೂಕಂಪದ ಸಂದರ್ಭದಲ್ಲಿ ಈ ಮನೆ ಬಿರುಕು ಬಿರಲ್ಲ ತುಂಬ ಸೇಫ್ಟಿ ಕೂಡ ಆಗಿದೆ. ಹಳೆಕಾಲದ ದೇವರ ಸಿದ್ಧಾಂತದಲ್ಲಿ ಮನೆಯನ್ನ ಕಟ್ಟಲಾಗಿದೆ. ದೇವಾಲಯದ ರೀತಿಯಲ್ಲಿ ಮನೆ ತಯಾರಿಸಿದ ಇಂಜಿನಿಯರ್ ಮನೆಯ ಯಜಮಾನ  ಜಯರಾಮ್.ಇನ್ನೂ ಒಂದು ವೇಳೆ ಈ ಮನೆ ಬೇಡವಾದಲಿ ಮನೆಯನ್ನ ಬೇರೆ ರೀತಿ ಕಟ್ಟಬಹುದು. ನೂರಾರು ವರ್ಷ ಬಳಕೆ ಬರುವ ಬಿಲ್ಡಿಂಗ್ ಇದಾಗಿದ್ದು,  ಯಾವುದಾದರೂ ರೂಂ ಬೇಡವಾದಲ್ಲಿ ಮತ್ತೆ ಬೇರೆ ರೂಂ ನ್ನ ತಂದು ಇಡಬಹುದು. ಬೇಡವಾದ್ರೆ ರೂಂನ್ನ ಬೇರೆಯವರಿಗೆ ಮಾರಾಟ ಸಹ  ಮಾಡಿ  ರೂಂನ್ನ ಶಿಫ್ಟ್ ಕೂಡ ಮಾಡಬಹುದು. ಅತ್ಯಂತ ಕಡಿಮೆ ವೆಚ್ಚದಲ್ಲಿ ಮನೆ ಕಟ್ಟಲಾಗಿದ್ದು, ಮನೆ ಗಾಳಿ ಬೆಳಕಿನಿಂದ , ನೈಸರ್ಗಿಕವಾಗಿ ಕೂಡಿದೆ. ಮನೆಲ್ಲಿರುವ ಎಲ್ಲಾ ವಸ್ತುಗಳು ಪ್ರಕೃತಿದತ್ತವಾಗಿದ್ದು, ಪ್ರಕೃತಿ ಸೊಬ್ಬಗಿನಿಂದ ಮನೆ ಕೂಡಿದೆ...ಈಗಿನ ಕಾಲದಲ್ಲಿ 20, 30 ವರ್ಷಕ್ಕೆ ಮನೆ ಬಳಕೆ ಬರುವುದಿಲ್ಲ, ಆದ್ರೆ ಈ ಮನೆ ನೂರಾರು ವರ್ಷ ಬಳಕೆ ಬರ್ತಿದೆ.ಮೂವತ್ತು ವರ್ಷಗಳ ಹಿಂದೆ ಈ ಮನೆ ಒಂದು‌ ಕಡೆಯಿಂದ ಇನ್ನೊಂದು ಕಡೆ ಶಿಫ್ಟ್ ಮಾಡಿದ್ರು,  ಬಿಲ್ಡಿಂಗ್ ನಲ್ಲಿ ಯಾವ್ದೇ  ಕ್ರಾಕ್ ಇಲ್ಲಿರುವುದು ಎಲ್ಲರಿಗೂ ಆಶ್ಚರ್ಯ ಉಂಟು ಮಾಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಚರಂಡಿ ನೀರನ್ನು ಶುದ್ಧ ಕುಡಿಯುವ ನೀರಾಗಿಸುವ ಯಂತ್ರದ ಪರಿವರ್ತನೆ