Publish Date: Thu, 21 May 2020 (09:46 IST)
Updated Date: Thu, 21 May 2020 (09:48 IST)
ಬೆಂಗಳೂರು: ನಿನ್ನೆ ಮಧ‍್ಯಾಹ್ನದ ವೇಳೆ ಬೆಂಗಳೂರಿನ ಉತ್ತರ ಭಾಗದಲ್ಲಿ ಕೇಳಿಬಂದ ಶಬ್ಧದ ಕುರಿತಂತೆ ಟ್ವಿಟರಿಗರು ಸ್ವಾರಸ್ಯಕರ ಚರ್ಚೆ ನಡೆಸಿದ್ದಾರೆ.
ಬೆಂಗಳೂರಿಗೆ ಏಲಿಯನ್ಸ್ ಆಗಮಿಸಿರಬೇಕು ಎಂದು ಹಲವರು ತಮಾಷೆ ಮಾಡಿದ್ದಾರೆ. ಐಪಿಎಲ್ ಮ್ಯಾಚ್ ನೋಡಲು ಏಲಿಯನ್ಸ್ ಬಂದಿರಬೇಕು. ಆದರೆ ಪಂದ್ಯವಿಲ್ಲದ ಕಾರಣ ಟುಸ್ ಎಂದಿರಬೇಕು ಎಂದು ಕೆಲವರು ತಮಾಷೆ ಮಾಡಿದ್ದಾರೆ.
ಮತ್ತೆ ಕೆಲವರು ಹಲವು ಮೆಮೆಗಳ ಮೂಲಕ ನಿಗೂಢ ಶಬ್ಧದ ಬಗ್ಗೆ ತಮಾಷೆ ಮಾಡಿದ್ದಾರೆ. ನಿಜಕ್ಕೂ ಬೆಂಗಳೂರಿಗೆ ಏಲಿಯನ್ಸ್ ಬಂದಿತ್ತಾ? ಹೀಗೆ ಶಬ್ಧ ಮಾಡಿದ್ದು ಯಾಕೆ ಎಂದೆಲ್ಲಾ ಸ್ವಾರಸ್ಯಕರವಾಗಿ ಟ್ವಿಟರಿಗರು ಬರೆದುಕೊಂಡಿದ್ದಾರೆ.