ಬೆಂಗಳೂರು: ವಿಧಾನಸೌಧ ವಜ್ರ ಮಹೋತ್ಸವಕ್ಕೆ ಶಾಸಕರಿಗೆ ಬೆಳ್ಳಿ, ಚಿನ್ನದ ಚಿಸ್ಕತ್ ವಿಚಾರ ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೆ ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅದನ್ನು ಮೊಟಕುಗೊಳಿಸಲಾಗಿತ್ತು. 10 ಕೋಟಿ ಮಿತಿಯಲ್ಲಿ ಸಮಾರಂಭ ಮಾಡಲು ಸಿಎಂ ಸೂಚಿಸಿದ್ದರು.
ಈಗ ಇದರ ಬೆನ್ನಲ್ಲೇ ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಿಸಲು ತೀರ್ಮಾನಿಸಿದ್ದ ಪ್ರಸ್ತಾವನೆಯನ್ನು ಕಡಿತಗೊಳಿಸಲಾಗಿದೆ. ಸಾಕ್ಷ್ಯಚಿತ್ರಕ್ಕೆ ನೀಡಲು ಉದ್ದೇಶಿಸಲಾಗಿದ್ದ ಹಣದಲ್ಲಿ ಶೇ. 60ರಷ್ಟು ಕಡಿತಗೊಳಿಸಿ ಆದೇಶ ಹೊರಡಿಸಲಾಗಿದೆ. ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ, ಟಿ.ಎನ್.ಸೀತಾರಾಮ್ ಮತ್ತು ಮಾ.ಕಿಶನ್ ಗೆ ವಿಧಾನಸೌಧ ವಜ್ರ ಮಹೋತ್ಸವಕ್ಕೆ ಶಾಸನಸಭೆ ಇತಿಹಾಸ ಸೇರಿ ಮೂರು ಸಾಕ್ಷ್ಯ ಚಿತ್ರ ನಿರ್ಮಿಸಲು ಸೂಚಿಸಲಾಗಿತ್ತು.
ಇದಕ್ಕೆ ಕೆಲ ನಿರ್ದೇಶಕರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ ಜನಸಾಮಾನ್ಯರು ಸಹ ವಿರೋಧ ವ್ಯಕ್ತಪಡಿಸಿದ್ದರು.