ವಿಧಾನಸೌಧದಲ್ಲಿ ಕಾರಿನಲ್ಲಿ ಕೋಟಿ ಕೋಟಿ ಹಣ ಸಿಕ್ಕ ಪ್ರಕರಣ ಇದೀಗ ಮರುಜೀವ ಪಡೆದುಕೊಂಡಿದೆ. ಸಿಬಿಐ ಕೋರ್ಟ್`ನ ನಿವೃತ್ತ ಜಡ್ಕ್ ಮತ್ತು ವಕೀಲರ ವಿಚಾರಣೆಗೆ ಎಸಿಬಿ ತಯಾರಿ ನಡೆಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಮುಖ್ಯ ಕಾರ್ಯದರ್ಶಿ ಆದೇಶದ ಹಿನ್ನೆಲೆಯಲ್ಲಿ ಈ ತನಿಖೆಗೆ ಎಸಿಬಿ ಮುಂದಾಗಿದೆ.
ವಿಧಾನಸೌಧದಲ್ಲಿ ಪತ್ತೆಯಾಗಿದ್ದ ಈ ಹಣ ಬಿಎಸ್`ವೈಗೆ ಸೇರಿದ್ದು, ಭ್ರಷ್ಟಾಚಾರ ಪ್ರಕರಣ ಮುಚ್ಚಿ ಹಾಕಲು ಕಿಕ್ ಬ್ಯಾಕ್ ಕೊಡಲು ಈ ಹಣ ತರಲಾಗಿತ್ತು ಎಂದು ಸಾಮಾಜಿಕ ಕಾರ್ಯಕರ್ತ ರವಿಕೃಷ್ಣಾರೆಡ್ಡಿ ಆರೋಪಿಸಿದ್ದರು. ಬಳಿಕ ಎಸಿಬಿಗೂ ದೂರು ನೀಡಿದ್ದರು. ಆರೋಪದ ಹಿನ್ನೆಲೆಯಲ್ಲಿ ಇದೀಗ ಮುಖ್ಯ ಕಾರ್ಯದರ್ಶಿ ಆದೇಶದ ಮೇಲೆ ತನಿಖೆಗೆ ಎಸಿಬಿ ನಿರ್ಧರಿಸಿದೆ. ಕಳದ ವರ್ಷದ ಅಕ್ಟೋಬರ್`ನಲ್ಲಿ ವಿಧಾನಸೌಧದ ಬಳಿ ಕಾರಿನಲ್ಲಿ 1.97 ಲಕ್ಷ ರೂಪಾಯಿ ವಶಕ್ಕೆ ಪಡೆಯಲಾಗಿತ್ತು. ಕಾರಿನಲ್ಲಿದ್ದ ಸಿದ್ಧಾರ್ಥ್ ನಾನು ಬಿಎಸ್`ವೈ ಮತ್ತು ಅವರ ಮಗನ ವಕೀಲರೆಂದು ಹೇಳಿದ್ದರು. ಅಂದು ಹಣ ವಶಕ್ಕೆ ಪಡೆದಿದ್ದ ಪೊಲೀಸರು ಐಟಿ ಅಧಿಕಾರಿಗಳ ವಶಕ್ಕೆ ಒಪ್ಪಿಸಿ ತನಿಖೆಗೆ ಮನವಿ ಮಾಡಿದ್ದರು.
ಇದೀಗ, ಎಸಿಬಿ ತಮಿಖೆಗೆ ಮುಂದಾಗಿದ್ದು, ಯಡಿಯೂರಪ್ಪನವರನ್ನ ಖುಲಾಸೆಗೊಳಿಸಿದ ನಿವೃತ್ತ ನ್ಯಾಯಾಧೀಶರು, ವಕೀಲರು ಮತ್ತು ಯಡಿಯೂರಪ್ಪನವರನ್ನ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ