ಹದಿನೆಂಟು ವರ್ಷ ತುಂಬದ ಹಾಗು ತನ್ನ ಜ್ಯೂವೆಲ್ಲರಿ ಶಾಪ್‌ನಲ್ಲಿ ಕೆಲಸ ಮಾಡ್ತಿದ್ದ ಇಬ್ಬರು ಅಪ್ರಾಪ್ತರನ್ನ ರಾಜು ಜೈನ್ ಈ ಕೃತ್ಯಕ್ಕೆ ಬಳಸಿದ್ದ. ಚಿನ್ನಾಭರಣ ಲೂಟಿ ನಾಟಕವಾಡಿದರೆ ಅತ್ತ ಚಿನ್ನಾಭರಣ ಕೂಡ ಸೇಫ್ ಇತ್ತ ಇನ್ಸ್ಯೂರೆನ್ಸ್ ಹಣ ಕೂಡ ಬರುತ್ತೆ ಎಂಬ ಕಾರಣಕ್ಕೆ ಕಳೆದ ಒಂದು ತಿಂಗಳಿಂದ ಧೂಮ್ 2 ಹಾಗು ದೃಶ್ಯಂ ಎಂಬ ಚಿತ್ರದಲ್ಲಿ ಬರುವಂತೆ ಪ್ಲಾನಿಂಗ್ ಮಾಡಿದ್ದರು ಎನ್ನಲಾಗಿದೆ. ಹಾಗು ಇಂತಹದ್ದೇ ದಿನ ಕೆಲಸ ಹಾಗು ಸಮಯದಲ್ಲಿ ಆಗಬೇಕು ಎಂಬ ಡೇಟ್ ಕೂಡ ಫಿಕ್ಸ್ ಮಾಡಿದ್ದರು ಎನ್ನಲಾಗಿದೆ.
ಇನ್ನು ಪ್ಲಾನಿಂಗ್‌ನಂತೆ ಹೈದರಾಬಾದ್‌ಗೆ ಚಿನ್ನಾಭೃಣ ಸಾಗಿಸಲು ಮೊದಲೇ ಟಿಕೇಟ್ ಬುಕ್ ಮಾಡಿದ್ದರು. ಹಾಗು ಚಿನ್ನಾಭರಣ ಸಾಗಿಸಲು ಬೇಕಾದಂತಹ ರಿಸೀಪ್ಟ್‌ಗಳನ್ನೂ ಕೂಡ ತಯಾರು ಮಾಡಿದ್ದರು. ಅವೆಲ್ಲಾವೂ ಕೂಡ ಸಿಸಿಟಿವಿಯ ಮುಂದೆಯೇ ನಡೆಸಿದ್ದರು. ನಂತರ ಅದೇ ಸಿಸಿಟಿವಿಯಲ್ಲಿ ರೆಕಾರ್ಡ್ ಆಗುವ ರೀತಿಯಲ್ಲಿ ಇಬ್ಬರು ಅಪ್ರಾಪ್ತರು ಚಿನ್ನಾಭರಣವನ್ನ ಓಲಾ ಬೈಕ್‌ನಲ್ಲಿ ಇಟ್ಟು ಅಲ್ಲಿಂದ ತೆರಳಿದ್ದರು. ನಂತರ ಪ್ಲಾನಿಂಗ್‌ನಂತೆ ಫ್ಲೈ ಓವರ್ ಬಳಿ ಬಂದು ಚಿನ್ನವನ್ನ ಅಡಗಿಸಿ ನಂತರ ಮಾಲೀಕನಿಗೆ ಇಬ್ಬರು ಅಪ್ರಾಪ್ತರು ಕರೆ ಮಾಡಿದ್ದರು. ನಂತರ ರಾಜು ಜೈನ್ ಪೊಲೀಸರಿಗೆ ಕರೆ ಮಾಡಿ ವಿಚಾರ ಮುಟ್ಟಿಸಿ ಅದಕ್ಕೆ ಪೂರಕ ಸಿಸಿಟಿವಿಗಳನ್ನ ಸಾಕ್ಷಿಯಾಗಿ ಕೊಟ್ಟಿದ್ದ. ಇನ್ನು ಹೈದರಾಬಾದ್‌ನಿಂದ ಬಂದ ವಾಟ್ಸಪ್ ಕಾಲ್ ಹಿಂದೆ ಬಿದ್ದಿದ್ದ ಪೊಲೀಸರಿಗೆ ಅಸಲಿ ಸಂಗತಿ ಹೊರ ಬಿದ್ದಿತ್ತು. ಒಂದು ತಿಂಗಳ ಪ್ಲಾನಿಂಗ್‌ನಲ್ಲಿ 15 ದಿನಗಳವರೆಗೂ ಟ್ರೈನಿಂಗ್ ನಡೆದಿತ್ತು. ಈ ವೇಳೆ ಪೊಲೀಸರ ಬಳಿ ಯಾವ ರೀತಿ ಉತ್ತರಿಸಿಬೇಕೆಂಬುದನೆಲ್ಲಾ ರಾಜು ಜೈನ್ ಟ್ರೈನಿಂಗ್ ನೀಡಿದ್ದ.
ಇನ್ನು ಕೃತ್ಯಕ್ಕೆ ಬಳಸಿದ್ದು 2.5 ಕೇಜಿಯಾದ್ರೂ ಒಂದು ಕೇಜಿ ಹೆಚ್ಚು ಚಿನ್ನಾಭರಣ ಕಳೆದಹೋಗಿದೆ ಎಂದು ದೂರು ನೀಡಿ ದಾರಿ ತಪ್ಪಿಸಿದ್ದರು. ಸದ್ಯ ಅಷ್ಟೂ ಜನ ಆರೋಪಿಗಳನ್ನ ಬಂಧಿಸಿ ಚಿನ್ನಾಭರಣವನ್ನ ಕಾಟನ್ ಪೇಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.