Select Your Language

Notifications

webdunia
webdunia
webdunia
webdunia

ಅಯೋಗ್ಯನ ಮಾತು ಕೇಳಿ ಧರ್ಮಸ್ಥಳದ ಪ್ರಕರಣ ಎಸ್‌ಐಟಿಗೆ ವಹಿಸಿದ್ದಾರೆ: ಪ್ರಹ್ಲಾದ ಜೋಶಿ

ಸಚಿವ ಪ್ರಹ್ಲಾದ್ ಜೋಶಿ

Sampriya

ಹುಬ್ಬಳ್ಳಿ , ಭಾನುವಾರ, 17 ಆಗಸ್ಟ್ 2025 (17:46 IST)
ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷ ಮುಸ್ಲಿಂ ಲೀಗ್‌ ಸೇರಿ ಹಲವು ಹಿಂದೂ ವಿರೋಧಿ ಸಂಘಟನೆಗಳ ಜತೆ ಸಂಪರ್ಕವಿಟ್ಟು ದೇಶದಲ್ಲಿರುವ ದೇವಾಲಯಗಳನ್ನು ಮುಚ್ಚುವ ಪ್ರಯತ್ನ ನಡೆಸುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶ ಆರೋಪಿಸಿದರು. 

ಇಂದು ಸುದ್ದಿಗಾರರ ಜತೆ ಮಾತನಾಡಿದ ಅವರು, ಯಾವುದೋ ಅಯೋಗ್ಯ ಹೇಳಿದ್ದಕ್ಕೆ ಧರ್ಮಸ್ಥಳ ಪ್ರಕರಣದ ತನಿಖೆಯನ್ನು ಎಸ್‌ಐಟಿಗೆ ವಹಿಸಿದರು. ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ವಿರುದ್ಧ ಬಾಯಿಗೆ ಬಂದ ಹಾಗೆ ಮಾತನಾಡಿದರು. ಇಂಥ ಅಯೋಗ್ಯರನ್ನು ಹುಡುಕಿದರೂ ಸಿಗುವುದಿಲ್ಲ ಎಂದು ಆಕ್ರೋಶ ಹೊರಹಾಕಿದರು.

ಇನ್ನೂ ಧರ್ಮಸ್ಥಳದ ಬುರುಡೆ ಪ್ರಕರಣದಲ್ಲಿ ಷಡ್ಯಂತ್ರವಿದೆಯೆಂದು ಡಿಸಿಎಂ ಡಿಕೆ ಶಿವಕುಮಾರ್ ಅವರೇ ಹೇಳಿದ್ದಾರೆ. ಅತ್ತ ಸಿಎಂ ಸಿದ್ದರಾಮಯ್ಯ ಮಾತ್ರ ಮುಖ್ಯಮಂತ್ರಿ ತನಿಖೆ ನಡೆಸುತ್ತಿದ್ದಾರೆ. ಬದ್ಧತೆಯಿಲ್ಲದ ಸರ್ಕಾರ, ಎರಡು ದೋಣಿಯ ಮೇಲೆ ಕಾಲಿಟ್ಟು ಕೆಲಸ ಮಾಡುತ್ತಿದೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ರಾಹುಲ್ ಗಾಂಧಿಯಿಂದ ಸಂವಿಧಾನಕ್ಕೆ ಅವಮಾನ: ಪಿನ್ ಟು ಪಿನ್ ಉತ್ತರ ಕೊಟ್ಟ ಚುನಾವಣಾ ಆಯೋಗ