ದೇವಿರಮ್ಮ ಬೆಟ್ಟಕ್ಕೆ ಎಲ್ಲ ಧರ್ಮಿಯರಿಗೂ ಮುಕ್ತ ಅವಕಾಶವಿದೆ. ಇಂದು ರಾತ್ರಿಯಿಂದಲೇ 3 ಸಾವಿರ ಅಡಿ ಬೆಟ್ಟವನ್ನ ಏರಿ ಭಕ್ತರಿಗೆ ದೇವಿರಮ್ಮನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಭಜರಂಗದಳ ಕಾರ್ಯಕರ್ತರು ಸಭ್ಯತೆ ಮೀರಿದ್ರೆ ಹುಷಾರ್ ಅಂತಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಸುದ್ದಿಯಾಗಿತ್ತು. ಹೀಗಾಗಿ ದೇವಾಲಯದ ಕಟ್ಟು ಪಾಡಿನಲ್ಲಿ ಬೆಟ್ಟವನ್ನ ಹತ್ತಿ ದೇವಿರಮ್ಮ ದರ್ಶನ ಪಡೆಯುವಂತೆ ದೇವಾಲಯ ಸಮಿತಿಯಿಂದ ಮನವಿ ಮಾಡಲಾಗಿದೆ. ಫೇಸ್ ಬುಕ್ ಸಾಮಾಜಿಕ ಜಾಲ ತಾಣದಲ್ಲಿ ಹರಿಡಿದ ಸುದ್ದಿಗೆ ಕಿವಿಕೊಡದಂತೆ ಮನವಿ ಮಾಡಲಾಗಿದೆ. ದೇವಿರಮ್ಮ ದೇವಾಲಯ ಸಮಿತಿ ಕಾರ್ಯಾಧ್ಯಕ್ಷ ಕುಲಶೇಖರ್ ಮನವಿ ಮಾಡಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಬಿಂಡಿಗದಲ್ಲಿರುವ ದೇವಿರಮ್ಮ ಬೆಟ್ಟದಲ್ಲಿ ಎಲ್ಲರಿಗೂ ಅವಕಾಶವಿದೆ ಎಂದಿದ್ದಾರೆ.
ಇಂದು ರಾತ್ರಿಯಿಂದಲೇ 3 ಸಾವಿರ ಅಡಿ ಬೆಟ್ಟವನ್ನ ಏರಿ ಭಕ್ತರಿಗೆ ದೇವಿರಮ್ಮನ ದರ್ಶನಕ್ಕೆ ಅವಕಾಶವಿದೆ ಎಂದು ತಿಳಿಸಿದ್ದಾರೆ. ರಾಜ್ಯದ ವಿವಿಧ ಕಡೆಗಳಿಂದ 70 ಸಾವಿರಕ್ಕೂ ಅಧಿಕ ಭಕ್ತರು ಪ್ರತಿವರ್ಷ ದರ್ಶನ ಪಡೆಯುತ್ತಾರೆ.