Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಚರ್ಚ್ ಸ್ಟ್ರೀಟ್ ರೀತಿ ಗಾಂಧಿ ಬಜಾರ್ ರಸ್ತೆ ಅಭಿವೃದ್ಧಿ !

ಚರ್ಚ್ ಸ್ಟ್ರೀಟ್ ರೀತಿ ಗಾಂಧಿ ಬಜಾರ್ ರಸ್ತೆ ಅಭಿವೃದ್ಧಿ !
bangalore , ಶನಿವಾರ, 18 ಮಾರ್ಚ್ 2023 (11:48 IST)
ಗಾಂಧಿ‌ ಬಜಾರ್ ರಸ್ತೆಯನ್ನ "ಮನಸು ಗಾಂಧಿ‌ ಬಜಾರ್" ಯೋಜನೆಯಡಿ ಸರ್ಕಾರ ಅಭಿವೃದ್ಧಿಪಡಿಸ್ತಾಇದೆ.ಆದ್ರೆ ಇದೀಗ ಈ ಯೋಜನೆಗೆ ಸ್ಥಳೀಯರು ವಿರೋದ ವ್ಯಕ್ತಪಡಿಸ್ತಿದ್ದಾರೆ.ಗಾಂಧಿ ಬಜಾರ್‌ನ ರಾಮಕೃಷ್ಞ ಆಶ್ರಮದದಿಂದ ಟ್ಯಾಗೋರ್ ವೃತ್ತದಿಂದವರೆಗಿನ 8೦೦ಮೀಟರ್ ರಸ್ತೆಯನ್ನ ವೈಟ್ ಟ್ಯಾಪಿಂಗ್ ಮಾಡಲಾಗ್ತಿದೆ.ಇ ಹಿ‌ಂದೆ 80ಅಡಿ ಇದ್ದ ರಸ್ತೆಯನ್ನ ಇದೀಗ ಕೇವಲ‌ 22ಅಡಿ ಮಾಡಿದ್ದಾರೆ .  12ಅಡಿ ಪುಟ್‌ಪಾತ್ ಅನ್ನು 35 ಅಡಿಗೆ ಹೆಚ್ಚಿಸಿ ಎರಡು ಬಾಗದಲ್ಲಿ  ನಿರ್ಮಿಸಲಾಗುತ್ತಿದೆ..ಆದರೆ ಇ ಕಾರ್ಯಕ್ಕೆ ಸ್ಥಳಿಯರು ವಿರೋದ ವ್ಯಕ್ತಪಡಿಸ್ತಾ ಇದ್ದಾರೆ.

ಯೋಜನೆ ರೂಪಿಸುವ ಮೋದಲೇ ಸ್ಥಳಿಯರು ಮೊದಲಿನಂತೆ ರಸ್ತೆ ನಿರ್ಮಿಸೊದಕ್ಕೆ  ಒತ್ತಾಯಿಸಿದ್ರಂತೆ ಆದರೆ ಸ್ಥಳೀಯರ ಬೇಡಿಕೆಯ ವಿರುದ್ಧವಾಗಿ ಚರ್ಚ್ ಸ್ಟ್ರೀಟ್ ಮಾದರಿಯಲ್ಲಿ ರಸ್ತೆ ನಿರ್ಮಿಸ್ತಾ ಇದ್ದಾರೆ ಎಂದು ಆರೋಪಿಸಲಾಗ್ತಿದೆ.  .ಕೇವಲ ದ್ವಿಚಕ್ರ ವಾಹನಗಳಿಗೆ ಮಾತ್ರ ಸಂಚಾರಕ್ಕೆ  ಅವಕಾಶಕೊಡುವ ಹುನ್ನಾರವನ್ನ ಮಾಡ್ತಿದ್ದು ,ಇದರಿಂದ ಸ್ಥಳೀಯ ಅಂಗಡಿ‌ ಮಾಲಿಕರಿಗೆ ಮುಂದಿನದಿನಗಳಲ್ಲಿ ವ್ಯಾಪಾರದಲ್ಲಿ ಕುಂಟಿತವಾಗಲಿದೆ ಎನ್ನೋ ಆರೋಪವು ಕೇಳಿ ಬಂದಿದೆ.ಪಾರಂಪರಿಕವಾಗಿ ಇದ್ದ ರೀತಿಯಾಗಿಯೇ ರಸ್ತೆಯನ್ನ ನಿರ್ಮಿಸಬೇಕು,ನಾವ್ಯಾರು ಚರ್ಚಸ್ಟ್ರೀಟ್ ಮಾದರಿಯ  ರಸ್ತೆಯನ್ನ ಕೇಳಿರಲಿಲ್ಲ ಇದರಿಂದ ಸ್ಥಳಿಯ ನಿವಾಸಿಗಳು ಮತ್ತು ಬೀದಿ ಬದಿ ವ್ಯಾಪಾರಿಗಳಿಗೆ ಸಾಕಷ್ಟು ತೊಂದರೆಯಾಗಲಿದೆ ಎಂದು ಗಾಂಧಿ ಬಜಾರ್ ವರ್ತಕರ ಸಂಘದ ವತಿಯಿಂದ ಬಿಬಿಎಂಪಿಗೆ  ಇಗಾಗಲೆ ಸಾಕಷ್ಟು ಬಾರಿ ಮನವಿಯನ್ನ ಮಾಡಿಕೊಳ್ಳಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಅಗ್ನಿ ದುರಂತ : ಮನೆಯಲ್ಲಿ ಮಲಗಿದ್ದ 10 ಮಂದಿ ಸಜೀವ ದಹನ!