Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
545 ಪಿಎಸ್ಐ ಹುದ್ದೆಗಳಿಗೆ ನೇಮಕಾತಿಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿ PSI ಪರೀಕ್ಷಾ ಅಕ್ರಮಕ್ಕೆ ಬಳಸಿದ್ದ ಎಲೆಕ್ಟ್ರಾನಿಕ್ ಡಿವೈಸ್ಗಳು ಪತ್ತೆಯಾಗಿವೆ. ರುದ್ರಗೌಡ ಪಾಟೀಲ್, ಮಹಾಂತೇಶ್ ಪಾಟೀಲ್ ಮನೆಯಲ್ಲಿ ಎಲೆಕ್ಟ್ರಾನಿಕ್ ಡಿವೈಸ್ ಪತ್ತೆಯಾಗಿದ್ದು, ಈ ಬಗ್ಗೆ ಸಿಐಡಿ ಇನ್ನೂ ದೃಢಪಡಿಸಿಲ್ಲ.. ಸಿಐಡಿ ಪೊಲೀಸರು ಇದು ಮಾದರಿ ಡಿವೈಸ್ ಎಂದು ತೋರಿಸ್ತಿದ್ದಾರೆ.. ಈಗಾಗಲೇ ರುದ್ರಗೌಡ, ಮಹಾಂತೇಶ್ನನ್ನು ಸಿಐಡಿ ಬಂಧಿಸಿದೆ..ರುದ್ರಗೌಡ PSI ಪರೀಕ್ಷೆ ಅಕ್ರಮದ ಕಿಂಗ್ಪಿನ್ ಆಗಿದ್ದಾರೆ. ಅಕ್ರಮವಾಗಿ ಪರೀಕ್ಷೆ ಬರೆದಿದ್ದವರನ್ನೂ ಪೊಲೀಸರು ಬಂಧಿಸಿದ್ದಾರೆ. ಪರೀಕ್ಷಾ ಅಕ್ರಮಕ್ಕೆ ಆರ್ಡರ್ ಕೊಟ್ಟು ಡಿವೈಸ್ ಸಿದ್ಧಪಡಿಸುತ್ತಿದ್ದರು.. ಸಿಮ್ ಅಳವಡಿಸಿ ಕೀಪ್ಯಾಡ್ ಮೊಬೈಲ್ ಮಾದರಿಯ ಪುಟ್ಟ ಕಿವಿಯಲ್ಲಿ ಇರಿಸಿಕೊಳ್ಳಲು ಬ್ಲೂಟೂತ್ ಡಿವೈಸ್ ಸಿದ್ಧಪಡಿಸುತ್ತಿದ್ದರು..ಯಾರಿಗೂ ಗೊತ್ತಾಗದಂತೆ ಪರೀಕ್ಷಾ ಅಕ್ರಮವೆಸಗುತ್ತಿದ್ದ ಅಭ್ಯರ್ಥಿಗಳು, ಪರೀಕ್ಷೆ ಮುಗಿದ ನಂತರ ಎಲೆಕ್ಟ್ರಾನಿಕ್ ಡಿವೈಸ್ ವಾಪಸ್ ನೀಡುತ್ತಿದ್ದರು..ಅಭ್ಯರ್ಥಿಗಳು ಪರೀಕ್ಷೆಯ ನಂತರ ಕಿಂಗ್ಪಿನ್ಗಳಿಗೆ ಎಲೆಕ್ಟ್ರಾನಿಕ್ ಡಿವೈಸ್ ಹಿಂದಿರುಗಿಸುತ್ತಿದ್ದರು.