Publish Date: Mon, 09 Oct 2023 (14:42 IST)
Updated Date: Mon, 09 Oct 2023 (15:02 IST)
ರಾಜ್ಯದಲ್ಲಿ 10,500ರ ಗಡಿ ಡೆಂಗ್ಯೂ ಕೇಸ್ ದಾಟಿದೆ.ಸಿಲಿಕಾನ್ ಸಿಟಿಯಲ್ಲಿ ಒಂದೇ ದಿನದಲ್ಲಿ ನೂರಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣಗಳು ದೃಡಪಟ್ಟಿದ್ದು,ರಾಜ್ಯದಲ್ಲಿ ಸುಮಾರು 10,832 ಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣ ದಾಖಲಾಗಿದೆ.ಸಿಲಿಕಾನ್ ಸಿಟಿಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಡೆಂಗ್ಯೂ ಕೇಕೆ ಹೆಚ್ಚಾಗಿದೆ.ಬೆಂಗಳೂರು ಒಂದರಲ್ಲೇ 5881 ಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣಗಳು ದೃಢಪಟ್ಟಿದೆ.ರಾಜ್ಯದಲ್ಲಿ 1ಲಕ್ಷಕ್ಕೂ ಹೆಚ್ಚು ಡೆಂಗ್ಯೂ ಶಂಕಿತರು ಪತ್ತೆಯಾಗಿದ್ದು,ಅದರಲ್ಲಿ 70 ಸಾವಿರ ಮಂದಿಗೆ ರಕ್ತದ ಸ್ಯಾಂಪಲ್ ಪರೀಕ್ಷೆಯಾಗಿದೆ.ಹತೋಟಿಗೆ ಸಿಗದೇ ಡೆಂಗ್ಯೂ ಹಾವಳಿ ಮುನ್ನುಗುತ್ತಿದೆ.