Publish Date: Sat, 16 Feb 2019 (11:30 IST)
Updated Date: Sat, 16 Feb 2019 (11:33 IST)
ಭಾರತೀಯ ವೀರ ಸೈನಿಕರ ಮೇಲೆ ಪಾಕಿಸ್ತಾನಿ ಉಗ್ರ ಸಂಘಟನೆಯ ದಾಳಿ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆಗಳು ಮುಂದುವರಿದಿವೆ.
ಬೆಂಗಳೂರು ಹೊರವಲಯ ನೆಲಮಂಗಲದಲ್ಲಿ ಪ್ರತಿಭಟನೆ ನಡೆಸಲಾಯಿತು. ಪಟ್ಟಣದ ಬಸವಣ್ಣದೇವರ ಮಠದಿಂದ ತಾಲೂಕು ಕಚೇರಿವರೆಗೂ ಉಗ್ರರ ವಿರುದ್ಧ ಪ್ರತಿಭಟನಾ ರ್ಯಾಲಿಯನ್ನು ಭಾರತೀಯ ಕಿಸಾನ್ ಸಂಘ ಹಾಗೂ ಸಂಘ ಪರಿವಾರದವರು ನಡೆಸಿದರು. ವೀರಯೋಧರ ಹುತಾತ್ಮರ ಆತ್ಮಕ್ಕೆ ಶಾಂತಿ ಸಿಗಲೆಂದು ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಮೆರವಣಿಗೆ ನಡೆಸಿ ಮೌನಾಚರಣೆಯನ್ನು ಪದಾಧಿಕಾರಿಗಳು ಕೈಗೊಂಡರು. ನೆಲಮಂಗಲ ತಾಲೂಕು ತಹಶೀಲ್ದಾರ್ ಕೆ.ಎನ್.ರಾಜಶೇಖರ್ ಗೆ ಮನವಿಯನ್ನು ಸಲ್ಲಿಸಿದರು. ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯನ್ನು ಮಟ್ಟಹಾಕಲು ಇಡೀ ವಿಶ್ವವೇ ಮುಂದಾಗಬೇಕು,
ಪ್ರಧಾನಿ ನರೇಂದ್ರ ಮೋದಿ ಅವರು ಕೂಡಲೇ ಪ್ರತಿಕಾರಕ್ಕೆ ಮುಂದಾಗಬೇಕು. ಇದಕ್ಕೆ ನಮ್ಮ ಬೆಂಬಲವಿದೆ ಎಂದು ಆಗ್ರಹಿಸಿದರು.