Publish Date: Thu, 01 Sep 2022 (13:42 IST)
Updated Date: Thu, 01 Sep 2022 (13:43 IST)
ಧಾರವಾಡ : ಸೆಪ್ಟೆಂಬರ್ 1 ರಿಂದ 20 ರವರೆಗೆ ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅಗ್ನಿಪಥ್ ಯೋಜನೆ ಅಡಿಯಲ್ಲಿ ಸೇನಾ ಭರ್ತಿಗಾಗಿ ದೈಹಿಕ ಪರೀಕ್ಷೆ ನಡೆಯಲಿವೆ.
ಈ ದೈಹಿಕ ಪರೀಕ್ಷೆಗೆ ಸಾಕಷ್ಟು ವಿದ್ಯಾರ್ಥಿಗಳು ಹೋಗಲು ತಯಾರಿ ನಡೆಸಿದ್ದಾರೆ. ಆದರೆ ಈಗ ಆ ವಿದ್ಯಾರ್ಥಿಗಳಿಗೆ ಪರೀಕ್ಷೆ ಭಯ ಆರಂಭವಾಗಿದೆ.
ಧಾರವಾಡ ಕರ್ನಾಟಕ ವಿವಿಯ ಪದವಿ ಪರೀಕ್ಷೆಗಳು ಕೂಡಾ ಇದೇ ಸಮಯದಲ್ಲಿ ಇವೆ. ಈಗಾಗಲೇ ಆಗಸ್ಟ್ 29 ರಿಂದ ಸೆಪ್ಟೆಂಬರ್ 20ರವರೆಗೆ ಕರ್ನಾಟಕ ವಿವಿ ಪರೀಕ್ಷಾ ದಿನಾಂಕ ಘೋಷಣೆ ಮಾಡಿ ಆಗಿದೆ. ಆದರೆ ಇದೇ ಸಮಯದಲ್ಲಿ ಸೇನಾ ಭರ್ತಿಯ ದೈಹಿಕ ಪರೀಕ್ಷೆ ಇವೆ.
ಕರ್ನಾಟಕ ವಿವಿ ವ್ಯಾಪ್ತಿಯ ಧಾರವಾಡ, ಹಾವೇರಿ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳು ಈಗ ಪದವಿ ಪರೀಕ್ಷೆ ಬರೆಯಬೇಕೋ ಅಥವಾ ಅಗ್ನಿಪಥ್ ದೈಹಿಕ ಪರೀಕ್ಷೆಗೆ ಹೋಗಬೇಕೋ ಎನ್ನುವ ಗೊಂದಲದಲ್ಲಿದ್ದಾರೆ.
ಹೀಗಾಗಿ ಕರ್ನಾಟಕ ವಿವಿಯ ಮೌಲ್ಯ ಮಾಪನ ಕುಲಸಚಿವರಿಗೆ ಮನವಿ ಕೊಟ್ಟು ಸೆಪ್ಟೆಂಬರ್ 20ರ ನಂತರ ಪದವಿ ಪರೀಕ್ಷೆ ನಡೆಸಲು ಮನವಿ ಮಾಡಿದ್ದಾರೆ.