ಆ ಗ್ರಾಮದಲ್ಲಿ ಇಡೀ ಊರಿಗೆ ಊರೇ, ಕಂಬನಿ ಮಿಡಿದಿತ್ತು. ಅಮರ ರಹೇ ಸಂತೋಷ ಅಮರ ರಹೇ
ಅಂತಾ ಘೋಷಣೆ ಎಲ್ಲಡೆ ಮುಳುಗಿತ್ತು. ಪಂಚ ಭೂತಗಳಲ್ಲಿ ಲೀನವಾದ ವೀರ ಯೋಧನಿಗೆ ಮತ್ತೆ ಹುಟ್ಟಿ ಬಾ ಅಂತಾ ಘೋಷಣೆ ಮುಗಿಲು ಮುಟ್ಟಿತ್ತು. ಇನ್ನು ವೀರ ಮರಣ ಹೊಂದಿದ ಯೋಧ ಸಂತೋಷನಿಗೆ ಸಕಲ ಸರ್ಕಾರಿ ಗೌರವದೊಂದಿಗೆ ಗೌರವ ನೀಡಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಹಲಗಾ ಗ್ರಾಮದಲ್ಲಿ ಕಂಬನಿ ಮುಗಿಲು ಮುಟ್ಟಿತ್ತು.
ಛತ್ತಿಸಗಡದ ಕಾಂಕೆರ್ ಜಿಲ್ಲೆಯ ಬತ್ಸರ್ ಪ್ರದೇಶದಲ್ಲಿ ನಕ್ಸಲ್ ರಿಂದ ಸುಧಾರಿತ ಬಾಂಬ ಸ್ಫೋಟದಲ್ಲಿ ಕರ್ನಾಟಕದ ಇಬ್ಬರು ಯೋಧರು ಹುತಾತ್ಮರಾಗಿದ್ದರು. ಇದರಲ್ಲಿ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಹಲಗಾ ಗ್ರಾಮದ ಯೋಧ ಸಂತೋಷ ಗುರವ್ (27) ಹುತಾತ್ಮರಾಗಿದ್ದಾರೆ. ಯೋಧನ ಪಾರ್ಥಿವ ಶರೀರವನ್ನು ಛತ್ತೀಸ್ಗಢ ದಿಂದ ವಿಶೇಷ ವಿಮಾನದ ಮೂಲಕ ಸ್ವಗ್ರಾಮಕ್ಕೆ ಆಗಮಿಸಿತು. ಇನ್ನು ಯೋಧನ ಪಾರ್ಥಿವ ಶರಿರಕ್ಕೆ ಗೌರವ ಸಲ್ಲಿಸಿ ಬರಮಾಡಿಕೊಂಡ ಖಾನಾಪೂರ ತಹಶಿಲ್ದಾರ ಸೇರಿದಂತೆ ಸರ್ಕಾರದ ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಗೌರವ ಸಲ್ಲಿಸಿದರು.
ಯೋಧನ ಅಂತಿಮ ದರ್ಶನಕ್ಕೆ ಗ್ರಾಮದ ಮರಾಠಾ ಶಾಲೆಯ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿದ್ದು ಮಳೆಯಲ್ಲೇ ಕೊಡೆ ಹಿಡಿದು ಯೋಧ ಸಂತೋಷನ ಅಂತಿಮ ದರ್ಶನ ಪಡೆದರು. ಇನ್ನು ಯೋಧನ ಅಂತ್ಯ ಸಂಸ್ಕಾರಕ್ಕ ಬೆಳಗಾವಿ ಜಿಲ್ಲಾಧಿಕಾರಿ ಎಸ್ ಜಿಯಾವುಲ್ಲಾ, ಸಿಇಓ ರಾಮಚಂದ್ರನ್, ಮಿಲಿಟರಿ ಅಧಿಕಾರಿಗಳು ಸೇರಿದಂತೆ ಮಾಜಿ ಶಾಸಕರು ಸೇರಿದಂತೆ ಸರ್ಕಾರಿ ಅಧಿಕಾರಿಗಳು ದರ್ಶನ ಪಡೆದರು.
ಸ್ವಗ್ರಾಮವಾದ ಹಲಗಾದ ಮರಾಠಾ ಸಮುದಾಯದ ರುದ್ರಭೂಮಿಯಲ್ಲಿ ಯೋಧನ ಪಾರ್ಥಿವ ಶರೀರಕ್ಕೆ ತಂದೆ ಲಕ್ಷ್ಮಣ ಗುರವ ಅವರಿಂದ ಅಗ್ನಿ ಸ್ಪರ್ಶ ಮಾಡಲಾಯಿತು. ಮರಾಠಾ ಸಂಪ್ರದಾಯದಂತೆ ಧಾರ್ಮಿಕ ವಿಧಿವಿಧಾನ ಕುಟುಂಬಸ್ಥರು ಅಂತ್ಯಕ್ರಿಯೆ ನೆರೆವೆರಿಸಿದರು. ಇನ್ನು ಸಿ ಆರ್ ಪಿ ಎಫ್ ಯೋಧರು ಗಾಳಿಯಲ್ಲಿ ಅಶ್ರುತರ್ಪಣ ಹಾರಿಸಿ ಗೌರವ ಅರ್ಪಿಸಿದರು. ವೀರ ಮರಣ ಹೊಂದಿದ ಸಂತೋಷ ಕುಟುಂಬಸ್ಥರ ಮನೆಯಲ್ಲಿ ಆಕ್ರಂದಣ ಮುಗಿಲು ಮುಟ್ಟಿತ್ತು.