ಚಿತ್ರದುರ್ಗದ ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಕ ಮಾಡುವ ವಿಚಾರ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು, ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಿಸಲು ಅರ್ಜಿ ಬಂದಿದೆ. ಕಂದಾಯ ಇಲಾಖೆ ವರದಿಯ ನಂತರ ತೀರ್ಮಾನ ಮಾಡಲಾಗುವುದು ಎಂದು ಹೇಳಿದ್ರು. ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ಕಂದಾಯ ಇಲಾಖೆಯಿಂದ ಸ್ಥಿತಿಗತಿಗಳ ಬಗ್ಗೆ ವರದಿ ಕೇಳಿದ್ದೇನೆ. ಆಡಳಿತಾಧಿಕಾರಿಯನ್ನು ನೇಮಿಸುವ ಪೂರ್ವದಲ್ಲಿ ಮಠದಲ್ಲಿ ಏನು ನಡೆದಿದೆ ಅನ್ನೋದರ ನ್ಯಾಯ ಸಮ್ಮತ ಮಾಹಿತಿ ಕಲೆಹಾಕಲಾಗ್ತಿದೆ. ವರದಿ ಬಂದ ನಂತರ ನಿರ್ಧಾರ ಮಾಡಲಾಗುತ್ತೆ ಎಂದ್ರು. ಶಿವಮೂರ್ತಿ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಅದರ ಬಗ್ಗೆ ನಾನು ವ್ಯಾಖ್ಯಾನ ಮಾಡೋಕೆ ಹೋಗಲ್ಲ. ನ್ಯಾಯಾಲಯದಲ್ಲೇ ಸತ್ಯಾಸತ್ಯತೆ ನಿರ್ಧಾರ ಆಗುತ್ತದೆ ಎಂದು ಚಿತ್ರದುರ್ಗದ ಸಾಣೇಹಳ್ಳಿಯಲ್ಲಿ ಸಿಎಂ ಬೊಮ್ಮಾಯಿ ಹೇಳಿದ್ರು.