ಲಿಬಿಯಾ ದೇಶದಲ್ಲಿ ಅಬ್ಬರಿಸಿದ ಭೀಕರ ಡೇನಿಯಲ್ ಚಂಡಮಾರುತ ಹಾಗೂ ಪ್ರವಾಹಕ್ಕೆ ಸಾವನ್ನಪ್ಪಿದವರ ಸಂಖ್ಯೆ 20 ಸಾವಿರಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಡಾರ್ನ ನಗರದ ಮೇಯರ್ ಅಬ್ದುಲ್ ಮೆನಾನ್ ಅಲ್ ಗೈದಿ ತಿಳಿಸಿದ್ದಾರೆ.. ಈ ಪೈಕಿ ಐದು ಸಾವಿರ ಶವಗಳು ಡೆರ್ನಾ ನಗರವೊಂದರಲ್ಲೇ ಪತ್ತೆಯಾಗಿದೆ. ಚಂಡಮಾರುತದಿಂದಾಗಿ 2 ಡ್ಯಾಮ್ ಒಡೆದು ಈ ದುರಂತ ಸಂಭವಿಸಿದೆ. ಪ್ರವಾಹದಲ್ಲಿ ಅತಿ ಹೆಚ್ಚು ಹಾನಿಗೊಳಗಾದ ಡೆರ್ನಾ ನಗರವೊಂದರಲ್ಲೇ 5000 ಶವಗಳು ಪತ್ತೆಯಾಗಿದ್ದು, ಇನ್ನೂ 10000ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಹೀಗಾಗಿ ಮೃತರ ಸಂಖ್ಯೆ 20,000 ದಾಟುವ ಆತಂಕ ಉಂಟಾಗಿದೆ. ಘಟನೆಯಲ್ಲಿ 10000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಭಾರೀ ಪ್ರವಾಹದ ಪರಿಣಾಮ ರಕ್ಷಣಾ ಸಿಬ್ಬಂದಿ ಪೂರ್ಣ ಪ್ರಮಾಣದಲ್ಲಿ ಡೆರ್ನಾ ನಗರವನ್ನು ತಲುಪುವುದೇ ಸಾಧ್ಯವಾಗಿಲ್ಲ. ಹೀಗಾಗಿ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿದೆ.