Publish Date: Mon, 19 Jun 2023 (18:33 IST)
Updated Date: Mon, 19 Jun 2023 (19:55 IST)
ಹಿಟ್ ಅಂಡ್ ಪ್ರಕರಣ ಸದ್ಯ ಬೆಚ್ಚಿಬೀಳುವಂತೆ ಮಾಡಿದೆ. ಕಾಣ್ತಿರೊ ಯುವಕನ ಹೆಸರು ಪ್ರಸನ್ನ ಕುಮಾರ್..ಪ್ರಸನ್ನ ಕುಮಾರ್ ಹೆಚ್.ಡಿ.ಕೋಟೆ ಮೂಲದವ್ನು..ಬೆಂಗಳೂರಿನ ಹೋಟೆಲ್ ನಲ್ಲಿ ಬಂದು ಕೆಲಸಕ್ಕೆ ಸೇರಿಕೊಂಡಿದ್ದ..ತಡರಾತ್ರಿ ಹೆಚ್ಚುವರಿಯಾಗಿ ಫುಡ್ ಡಿಲವರಿ ಬಾಯ್ ಆಗಿ ಕೆಲಸ ಮಾಡ್ತಿದ್ದ.ಅದೇ ರೀತಿ ಮಧ್ಯರಾತ್ರಿ ನಾಯಂಡಹಳ್ಳಿ ಕಡೆಯಿಂದ ಆರ್ ಆರ್ ನಗರ ರಸ್ತೆ ಮಾರ್ಗವಾಗಿ ತೆರಳ್ತಿದ್ದ ಈ ವೇಳೆ ರಾತ್ರಿ 1.23 ಕ್ಕೆ ಅತೀ ವೇಗವಾಗಿ ಹಿಂಬದಿಯಿಂದ ಬಂದ ಕೆಎ 02 ಎಂಎಸ್ 4995 ನಂಬರ್ ನ ಕಿಯಾ ಕಾರು ಬೈಕ್ ಗೆ ಡಿಕ್ಕಿ ಹೊಡೆದಿದೆ..ಡಿಕ್ಕಿಯ ರಭಸಕ್ಕೆ ಬೈಕ್ ಸಮೇತ ೫೦ ಮೀಟರ್ ದೂರದ ವರೆಗೂ ಹಾರಿ ಬಿದ್ದಿದ್ದು ಸ್ಥಳದಲ್ಲೇ ಸಾವ ಪ್ರಸನ್ನ ಕುಮಾರ್ ಸಾವಿಗೆ ಕಾರಣ ಆದ ಕಾರು ಚಾಲಕ ಈತನೆ ನೋಡಿ ಹೆಸರು ವಿನಾಯಕ್..ವಿಜಯನಗರ ಮೂಲದ ವಿನಾಯಕ್ ರಾಜಾಜಿನಗರದಲ್ಲಿರುವ ಮಹೀಂದ್ರ ಕಾರ್ ಶೋ ರೂಂ ನಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡ್ತಿದ್ದ.ನಿನ್ನೆ ಇನ್ಸೆಂಟಿವ್ ಸಿಕ್ಕ ಖುಷಿಗೆ ಪಾರ್ಟಿ ಇಟ್ಟುಕೊಂಡಿದ್ದ ಯಶವಂತಪುರ ಬಳಿ ಪಾರ್ಟಿ ಮಾಡಿದ್ದ ವಿನಾಯಕ್ ಕುಡಿದು ಟೈಟಾಗಿದ್ದ.ಕುಡಿದ ಮತ್ತಲ್ಲಿಯೇ ತಡರಾತ್ರಿ ಸಾಗರ್ ಸೇರಿ ಮೂವರು ಯುವತಿಯರ ಜೊತೆಗೆ ಕಾರಿನಲ್ಲಿ ಹೊರಟಿದ್ದ ಸಾಗರ್ ನನ್ನ ಆರ್.ಆರ್. ನಗರ ಡ್ರಾಪ್ ಮಾಡಲು ನಾಯಂಡಹಳ್ಳಿ ಮಾರ್ಗವಾಗಿ ಆರ್.ಆರ್.ನಗರದ ಕಡೆಗೆ ಹೊರಟಿದ್ದ.ಈ ವೇಳೆ ಮೋಜು ಮಸ್ತಿ ಮಾಡ್ತಾ ಬಂದವರು ಪ್ರಸನ್ನ ಕುಮಾರ್ ಬೈಕ್ ಗೆ ಡಿಕ್ಕಿ ಹೊಡೆದಿದ್ದಾನೆ.ಇಷ್ಟಾದರು ಕಾರು ನಿಲ್ಲಿಸದೇ ಪರಾರಿಯಾಗಿದ್ದ ಸುಮಾರು ಒಂದು ಕಿಲೋ ಮೀಟರ್ ಸೂರ ಚೇಸ್ ಮಾಡಿ ಕಾರು ಅಡ್ಡಗಟ್ಟಿದ ಸ್ಥಳೀಯರು ಕಾರಿನ ಗಾಜು ಪುಡಿ ಪುಡಿ ಮಾಡಿದ್ದಾರೆ.ಕಾರಲ್ಲಿದ್ದ ಯುವತಿಯರು ಎಸ್ಕೇಪ್ ಆದ್ರೆ ಚಾಲಕ ವಿನಾಯಕ್ ನನ್ನ ಪೊಲೀಸರಿಗೆ ಒಪ್ಪಿಸಿದ್ದಾರೆ .ಘಟನೆ ಸಂಬಂಧ ಬ್ಯಾಟರಾಯನಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.