Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬಿಜೆಪಿ ಹಾಗೂ ಜೆಡಿಎಸ್ ಶಾಸಕರಿಗೆ ವಾರ್ನಿಂಗ್ ನೀಡಿದ ಡಿಸಿಎಂ ಡಿಕೆಶಿ

ಬಿಜೆಪಿ ಹಾಗೂ ಜೆಡಿಎಸ್ ಶಾಸಕರಿಗೆ ವಾರ್ನಿಂಗ್ ನೀಡಿದ ಡಿಸಿಎಂ ಡಿಕೆಶಿ
bangalore , ಸೋಮವಾರ, 28 ಆಗಸ್ಟ್ 2023 (14:33 IST)
ವಿವಿಧ ಪ್ರಕರಣ ತನಿಖೆ ವಿಚಾರವಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು,ಹಿಂದೆ ನಾವು ಸಾಕಷ್ಟು ಆರೋಪ ಮಾಡಿದ್ದೆವು.ರಮೇಶ್‌ ಜಾರಕಿಹೊಳಿದು, ಆರ್.ಡಿ.ಪಿಆರ್ ಮಂತ್ರಿಗಳದ್ದು.ಅವರು ಹಾಕಿಕೊಟ್ಟ ದಾರಿಯನ್ನೇ ನಾವು ಫಾಲೋ ಮಾಡ್ತಿದ್ದೇವೆ.ಸಂತೋಷ್ ಪಾಟೀಲ್ ವಿಚಾರವಾಗಿ ತನಿಖೆ ಮಾಡುವಂತೆ ಅವರ ಮನೆಯವರು ಮನವಿ ಮಾಡಿದ್ರು.ತನಿಖೆ ನಡೆಯೋ ಮೊದಲೇ ದೋಷಮುಕ್ತರಾಗಿ ಬರ್ತಾರೆ ಅಂತ ಅವರೇ ಹೇಳಿಕೊಂಡಿದ್ರು.ಇನ್ವೆಸ್ಟಿಗೇಷನ್ ಟೀಮ್ ದಿಕ್ಕು ತಪ್ಪಿಸಿದ್ರು.ಅದೇ ದಾರಿ ನಮಗೆ ತೋರಿಸಿದ್ದಾರೆ.ಸಮಾಜ ಏನು ಒಪ್ಪಿದೆ ನಾವು ಅದನ್ನ ಮಾಡ್ತಿದ್ದೇವೆ.ನೀವು ಕ್ಲೀನ್ ಇದ್ದಾಗ ಭಯ ಯಾಕೆ.?ನಮ್ಮ ಮೇಲೆ ಆರೋಪ ಮಾಡಲಿಲ್ಲವಾ.?ಇನ್ನೂ ತೆಗೀಬೇಕಾ.?ಬೆಂಗಳೂರು ಸುತ್ತ ಮುತ್ತಲಿನ ಪಟ್ಟಿ ತೆಗೀಬೇಕಾ? ಎಂದು ಬಿಜೆಪಿ ಹಾಗೂ ಜೆಡಿಎಸ್ ಶಾಸಕರಿಗೆ ಡಿಕೆ ಶಿವಕುಮಾರ್ ವಾರ್ನಿಂಗ್ ಕೊಟ್ಟಿದ್ದಾರೆ.
 
ಇನ್ನೂ ಮೆಡಿಕಲ್ ಕಾಲೇಜು ಕನಕಪುರಕ್ಕೆ ಶಿಫ್ಟ್ ಮಾಡುವ ವಿಚಾರವಾಗಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಅವರೇ ಮಾಡಿಕೊಟ್ಟದ್ದು.ನಮಗೂ ಸ್ವಾರ್ಥ ಇದೆ.ನಮ್ಮ ಕ್ಷೇತ್ರದಲ್ಲೂ ಮೆಡಿಕಲ್ ಕಾಲೇಜು ಇರಬೇಕು ಅಂತ.ರಾಮನಗರ ಜಿಲ್ಲೆಯ ಮೂರು ಕಿ.ಮೀ ದೂರದಲ್ಲೇ ಆಸ್ಪತ್ರೆ ಇರೋದು.ಕನಕಪುರ ಬಾರ್ಡರ್‌ ವರೆಗೂ ಅದು ಅನ್ವಯ ಆಗಲಿದೆ.ಡಿಸ್ಟ್ರಿಕ್ಟ್ ಆಸ್ಪತ್ರೆ ಆಗಲಿ ಅನ್ನೋದು ನಮ್ಮ ಆಸೆ.ಇತ್ತೀಚೆಗೆ ಅದು ಉದ್ಘಾಟನೆ ಕೂಡ ನಡೆದಿದೆ.ಹಿಂದೆ ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಬದಲಾವಣೆ ಮಾಡಿದ್ದಾರೆ.ರಾಮನಗರಕ್ಕೆ ಬರಬೇಕಿದ್ದ ಕಾಲೇಜು ಚಿಕ್ಕಬಳ್ಳಾಪುರಕ್ಕೆ ತೆಗೆದುಕೊಂಡು ಹೋಗಿದ್ದಾರೆ.ನಿಯೋಗ ಯಡಿಯೂರಪ್ಪ ಅವರನ್ನ ಭೇಟಿ ಮಾಡಿದೆವು.ಯಡಿಯೂರಪ್ಪ ಭರವಸೆ ಕೊಟ್ಟಿದ್ರು ರೀಸ್ಟೋರ್ ಮಾಡ್ತೀನಿ ಅಂತ.ಚುನಾವಣೆ ಬಂದಾಗ ಎತ್ತಿ ಕಟ್ಟುವ ಕೆಲಸ ಆಗಿದೆ.ನನ್ನಬಳಿ ದಾಖಲೆ ಇಲ್ವಾ.?ಕುಮಾರಸ್ವಾಮಿ ಅವರೇ ಬಜೆಟ್ ಸ್ಪೀಚ್‌ನಲ್ಲಿ ಹೇಳಿದ್ರು.ಕನಕಪುರಕ್ಕೆ ಮೆಡಿಕಲ್ ಕಾಲೇಜು ಸ್ಯಾಂಗಷನ್ ಮಾಡಲಾಗಿದೆ ಅಂತ.ಅವರು ಸಿಎಂ ಹೇಗೆ ಸುಮ್ಮನೆ ಆಗಿಬಿಟ್ರಾ.?ನಮ್ಮ ಶಾಸಕರು ಬೆಂಬಲ‌ ಕೊಟ್ಟಿದ್ದಕ್ಕೆ ತಾನೆ ಅವರೂ ಸಿಎಂ ಆಗಿದ್ದು ಎಂದು ಮಾಜಿ ಸಿಎಂ ಹೆಚ್.ಡಿ.ಕೆ ವಿರುದ್ಧ  ಡಿಸಿಎಂ ಡಿಕೆಶಿ ವಾಗ್ದಾಳಿ ನಡೆಸಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಸೊಸೆಯನ್ನು ರಕ್ಷಿಸಲು ತನ್ನ ಗಂಡನನ್ನೇ ಕೊಡಲಿಯಿಂದ ಕೊಚ್ಚಿ ಕೊಲೆಗೈದ ಪತ್ನಿ!