Publish Date: Fri, 06 Sep 2019 (11:21 IST)
Updated Date: Fri, 06 Sep 2019 (11:22 IST)
ಬೆಂಗಳೂರು : ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಉಪಮುಖ್ಯಮಂತ್ರಿ ಡಾ.ಅಶ್ವತ್ಥ್ ನಾರಾಯಣ‍್ ವಾಗ್ದಾಳಿ ನಡೆಸಿದ್ದಾರೆ.
ನವಭಾರತ ನಿರ್ಮಾಣ ಮಾಡ್ತೀರಾ ಎಂದು ಹೆಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಕ್ಕೆ ಆಕ್ರೋಶಗೊಂಡ ಉಪಮುಖ್ಯಮಂತ್ರಿ ಡಾ.ಅಶ್ವತ್ಥ್ ನಾರಾಯಣ ಟ್ವೀಟರ್ ನಲ್ಲಿ ಹೆಚ್.ಡಿಕೆ ವಿರುದ್ಧ ಕಿಡಿಕಾರಿದ್ದಾರೆ.
‘ಕುಮಾರಸ್ವಾಮಿ ಹೇಳಿಕೆ ಅವರ ಅಜ್ಞಾನವನ್ನು ಪ್ರದರ್ಶಿಸಿದೆ. ಅಧಿಕಾರದಲ್ಲಿರದ ಕಾರಣ ಅಸಂಬದ್ಧ ಹೇಳಿಕೆ ನೀಡ್ತಿದ್ದಾರೆ. ಅಸಂಬದ್ಧ ಹೇಳಿಕೆ ನಿಮ್ಮ ಹಳೆಯ ಚಾಳಿಯಾಗಿದೆ. ವಾಸ್ತವಾಂಶ ತಿಳಿದುಕೊಳ್ಳದೆ ಏನೇನೊ ಹೇಳ್ತಾರೆ’ ಎಂದು ಟ್ವೀಟ್ ಮಾಡಿ ಕುಮಾರಸ್ವಾಮಿ ವಿರುದ್ಧ ಡಿಸಿಎಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.