Publish Date: Sat, 27 Jul 2019 (18:32 IST)
Updated Date: Sat, 27 Jul 2019 (18:35 IST)
ತುಮಕೂರು ಡಿಸಿಸಿ ಬ್ಯಾಂಕ್ ನ್ನು ಸೂಪರ್ ಸೀಡ್ ಮಾಡಿರೋ ಕ್ರಮ ಪ್ರಶ್ನಿಸಿ ಕೋರ್ಟ್ ಮೊರೆ ಹೋಗಿದ್ದ ಕೆ.ಎನ್.ರಾಜಣ್ಣ ಮತ್ತೆ ಬ್ಯಾಂಕಿನ ಮೇಲೆ ತಮ್ಮ ಹಿಡಿತ ಪ್ರಬಲಗೊಳಿಸಿದ್ದಾರೆ.
ತುಮಕೂರು ಡಿಸಿಸಿ ಬ್ಯಾಂಕ್ ಸೂಪರ್ ಸೀಡ್ ಮಾಡಲಾಗಿತ್ತು. ಸರಕಾರದ ಕ್ರಮದ ವಿರುದ್ಧ ಸಹಕಾರ ಸಂಘಗಳ ಅಪರ ನಿಬಂಧಕರ ನ್ಯಾಯಾಲಯಕ್ಕೆ ಮೊರೆ ಹೋಗಲಾಗಿತ್ತು.
ಅರ್ಜಿ ವಿಚಾರಣೆ ನಡೆದು ಸರಕಾರಕ್ಕೆ ಆದೇಶಕ್ಕೆ ತಡೆ ನೀಡಲಾಗಿದೆ. ಹೀಗಾಗಿ ಕೆ.ಎನ್.ರಾಜಣ್ಣ ಡಿಸಿಸಿ ಬ್ಯಾಂಕ್ ನ್ನ ಮತ್ತೆ ತಮ್ಮ ಕೈ ವಶ ಮಾಡಿಕೊಳ್ಳುವಲ್ಲಿ ಸಫಲರಾಗಿದ್ದಾರೆ.
ಈ ಮೂಲಕ ಬ್ಯಾಂಕ್ ನಡೆಸೋ ಅಧಿಕಾರ ಕೆ.ಎನ್.ರಾಜಣ್ಣ ನೇತೃತ್ವದ ಟೀಂ ಗೆ ದೊರಕಿದಂತಾಗಿದೆ.