ದಿನದಿಂದ ದಿನಕ್ಕೆ ಬೆಳ್ಳುಳ್ಳಿಯ ಬೆಲೆ ಗಗನಕ್ಕೇರಿದೆ.400 ರ ಗಡಿ ಬೆಳ್ಳುಳ್ಳಿಯ ಬೆಲೆ ಮುಟ್ಟಿದೆ.ಅಕಾಲಿಕ ಮಳೆಗೆ ಬೆಳೆ ಹಾನಿಯಾಗಿದೆ.ಸರಿಯಾದ ಬೆಳೆ ಬಾರದ ಪರಿಣಾಮ ಬೆಳ್ಳುಳಿಯ ಬೆಲೆ ಏರಿಕೆಯಾಗಿದೆ.ಒಂದು ಕೆಜಿ ಬೆಳ್ಳುಳ್ಳಿಯ ಬೆಲೆ 380 ರೂ ಗೆ ಏರಿಕೆಯಾಗಿದೆ.
ಬೆಲೆ ಕೇಳಿ ಗ್ರಾಹಕರು ಶಾಕ್ ಆಗಿದ್ದಾರೆ.ಇಷ್ಟು ದಿನಗಳ ಕಾಲ ನಾಸಿಕ್ ನಿಂದ ಬೆಳ್ಳುಳ್ಳಿಯನ್ನ ರಫ್ತು ಮಾಡಿಕೊಳ್ಳಲಾಗುತ್ತಿತ್ತು.ಆದ್ರೆ ನಾಸಿಕ್ ಮತ್ತು ಪುನಾದಿಂದ ಬರುವ ಆಮದು ಕಡಿಮೆಯಾಗಿದ್ದು,ಸದ್ಯ ಮಧ್ಯ ಪ್ರದೇಶ, ಗುಜರಾತ್, ರಾಜಸ್ತಾನ್ ನಿಂದ ಬೆಳ್ಳುಳ್ಳಿಯನ್ನ ರಫ್ತು ಮಾಡಿಕೊಳ್ಳಾಲಾಗುತ್ತಿದ್ದು,ಸಾಗಾಣೆ ವೆಚ್ಚವನ್ನ ಹೇರಿಕೆ ಮಾಡುತ್ತಿದ್ದಾರೆ.ಅಲ್ಲದೇ ಈ ಹಿಂದೆ 25 ರಿಂದ 30 ಚೀಲ ಲಾರಿಗಳಲ್ಲಿ ಮಾಲೂ ಪೂರೈಕೆಯಾಗುತ್ತಿತ್ತು.
ಆದ್ರೆ ಇದೀಗಾ 9 ರಿಂದ 10 ಲೋಡ್ ಗಳು ಬರುವುದು ಕಷ್ಟವಾಗಿದೆ.ಬೆಳ್ಳುಳ್ಳಿಯ ಬೆಲೆ ಏರಿಕೆಯಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ.ಬೆಳ್ಳುಳ್ಳಿ ಖರೀದಿ ಮಾಡ್ಬೇಕು ಅಂದ್ರೆ ಒಮ್ಮೆ ಯೋಚನೆ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.ಈ ಮಧ್ಯೆ ಸೈಲೆಂಟ್ ಆಗಿಯೇ ಮತ್ತೆ ಈರುಳ್ಳಿ ಏರಿಕೆಯಾಗುತ್ತಿದೆ. ಇಂದಿನ ಮಾರುಕಟ್ಟೆಯಲ್ಲಿ ಕೆಜಿಗೆ 50 ರೂಪಾಯಿ ಈರುಳ್ಳಿಯಾಗಿದೆ.ಮುಂದಿನ ದಿನದಲ್ಲಿ ಮತ್ತೆ ಬೆಳ್ಳುಳ್ಳಿ ಏರಿಕೆಯಾಗಲಿದೆ ಅಂತಾ ವ್ಯಾಪಾರಸ್ಥರು ಹೇಳ್ತಿದ್ದಾರೆ.