Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಆನ್‌ಲೈನ್ ಖರೀದಿ ವಿಶ್ವಾಸಾರ್ಹವೇ? ವಾರಂಟಿ ನಿಜವೇ?

ಆನ್‌ಲೈನ್ ಖರೀದಿ ವಿಶ್ವಾಸಾರ್ಹವೇ? ವಾರಂಟಿ ನಿಜವೇ?
delhi , ಗುರುವಾರ, 7 ಡಿಸೆಂಬರ್ 2023 (15:17 IST)
ಅಂತಾರಾಷ್ಟ್ರೀಯ ಬ್ರಾಂಡ್‌ಗಳು ಕೆಲವು ಉತ್ಪನ್ನಗಳನ್ನು ಆನ್‌ಲೈನ್‌ನಲ್ಲಿ ಖರೀದಿಸಿದರೆ ವಾರಂಟಿಗೆ ಅರ್ಹವಲ್ಲ ಎಂದು ಘೋಷಿಸಿವೆ. ಆದರೆ ಮೂರನೇ ವ್ಯಕ್ತಿಯಾದ ಆನ್‌ಲೈನ್ ಮಾರಾಟಗಾರ ಕೆಲವು ನಿದರ್ಶನಗಳಲ್ಲಿ ವಾರಂಟಿ ನೀಡುತ್ತಾರೆ.

ಉದಾಹರಣೆಗೆ ಟಿಸ್ಸಾಟ್ ಎರಡು ವರ್ಷಗಳ ಅಂತಾರಾಷ್ಟ್ರೀಯ ವಾರಂಟಿಯನ್ನು ಟಿಸ್ಸಾಟ್ ಎಸ್‌ಎ ಹೆಸರಿನಲ್ಲಿ ನೀಡಿದರೆ, ಕೆಲವು ಮಾರಾಟಗಾರರು ಇ ವಾಣಿಜ್ಯ ವೆಬ್‌ಸೈಟ್‌ಗಳಲ್ಲಿ ಒಂದು ವರ್ಷದ ವಾರಂಟಿ ಎಂದು ಪೋಸ್ಟ್ ಮಾಡುತ್ತಾರೆ.
 
ಆನ್‌ಲೈನ್ ಚಿಲ್ಲರೆ ಮಾರಾಟಗಳ ಪ್ರಮಾಣ ಏರುತ್ತಿರುವ ನಡುವೆ, ಇ-ವಾಣಿಜ್ಯ ಕೈಗಾರಿಕೆ ಪ್ರಸಕ್ತ ವಿತ್ತೀಯ ವರ್ಷದಲ್ಲಿ 216 ಶತಕೋಟಿಯನ್ನು ಮುಟ್ಟುವುದೆಂದು ನಿರೀಕ್ಷಿಸಲಾಗಿದೆ. ಆದರೆ ಈ ಕ್ಷೇತ್ರವು ಈಗಾಗಲೇ ಟೀಕೆಗಳನ್ನು ಎದುರಿಸಿದ್ದು, ಉತ್ಪಾದಕರು ಮತ್ತು ಗ್ರಾಹಕರು ಆನ್‌ಲೈನ್ ಖರೀದಿಗಳಿಗೆ ವಾರಂಟಿಗಳ ವಿಶ್ವಾಸಾರ್ಹತೆ ಕುರಿತು ಪ್ರಶ್ನಿಸಿದ್ದಾರೆ.
 
ಈ ವಾರಂಟಿಗೆ ಉತ್ಪಾದಕರು ಮಾನ್ಯತೆ ನೀಡುವುದಿಲ್ಲ. ನಿಕಾನ್, ಡೆಲ್, ಎಚ್‌ಪಿ, ಲಿನೋವಾ ಬಗ್ಗೆ ಈ ರೀತಿಯ ದೂರುಗಳಿಲ್ಲ. ಗ್ರಾಹಕರು ದರ ಮತ್ತು ವಾರಂಟಿ ವಿಷಯಗಳ ಬಗ್ಗೆ ತಿಳಿದಿರುತ್ತಾರೆ. ಆನ್‌ಲೈನ್ ಖರೀದಿ ಮಾಡುವಾಗ ಯಾವುದನ್ನೂ ಮುಚ್ಚಿಡುವುದಿಲ್ಲ ಎಂದು ಕೆಪಿಎಂಜಿ ಮ್ಯಾನೇಜ್‌ಮೆಂಟ್ ಕನ್ಸಲ್ಟಿಂಗ್ ಮುಖ್ಯಸ್ಥ ಅಂಬರೀಷ್ ದಾಸ್‌ಗುಪ್ತಾ ಹೇಳಿದ್ದಾರೆ.
 
 ಆನ್‌ಲೈನ್ ವಾರಂಟಿ ಘೋಷಣೆ ಕಡ್ಡಾಯವಲ್ಲ. ಬಹುತೇಕ ಇ ವಾಣಿಜ್ಯ ಸೈಟ್‌ಗಳು ಕೇವಲ ಖರೀದಿಗಾರ ಮತ್ತು ವಾಸ್ತವ ಆನ್‌ಲೈನ್ ಮಾರಾಟಗಾರನ ನಡುವೆ  ಮಧ್ಯಸ್ಥಿಕೆ ವಹಿಸುತ್ತವೆ. 

Share this Story:

Follow Webdunia kannada

ಮುಂದಿನ ಸುದ್ದಿ

ಅಪ್ರಾಪ್ತ ಬಾಲಕಿಯ ಮೇಲೆ ರೇಪ್ ಎಸಗಿದ ವಯೋವೃದ್ಧ