Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ದಸರಾ ಮೆರವಣಿಗೆಗೆ ಸಕಲ ಸಿದ್ಧತೆಯೂ ಭರದಿಂದ ಸಾಗಿದೆ: ರಂದೀಪ್

ದಸರಾ ಮೆರವಣಿಗೆಗೆ ಸಕಲ ಸಿದ್ಧತೆಯೂ ಭರದಿಂದ ಸಾಗಿದೆ: ರಂದೀಪ್
ಮೈಸೂರು , ಗುರುವಾರ, 28 ಸೆಪ್ಟಂಬರ್ 2017 (18:28 IST)
ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವದ ವಿಜಯದಶಮಿ ಮೆರವಣಿಗೆಗೆ ಸಕಲ ಸಿದ್ದತೆಗಳು ಭರದಿಂದ ಸಾಗಿದೆ ಎಂದು ದಸರಾ ವಿಶೇಷಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಿ. ರಂದೀಪ್ ಹೇಳಿದರು.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಗದ್ವಿಖ್ಯಾತ ವಿಜಯದಶಮಿಯ ಮೆರವಣಿಗೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರಿಂದ, ಅಂಬಾವಿಲಾಸ ಅರಮನೆಯಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಬರುವ ಪ್ರವಾಸಿಗರಿಗೆ ಹಾಗೂ ಗಣ್ಯರಿಗೆ ಅರಮನೆ ಪ್ರವೇಶ ಮತ್ತು ಪಾರ್ಕಿಂಗ್ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಿದರು.

ಗೋಲ್ಡ್ ಕಾರ್ಡ್ ಮತ್ತು ಅಧಿಕೃತ ಟಿಕೆಟ್ ಹೊಂದಿರುವ ವ್ಯಕ್ತಿಗಳಿಗೆ 10 ಪ್ರವೇಶ ದ್ವಾರಗಳ ಮೂಲಕ 15 ಆವರಣಗಳಿಗೆ ಪ್ರವೇಶಿಸಲು ಅನುವು ಮಾಡಿಕೊಡಲಾಗುವುದು. ಈ ಬಾರಿ ವಿಶೇಷವಾಗಿ ಬುಕ್‍ಮೈ ಶೋ ಅವರು ಟಿಕೆಟ್ ವ್ಯವಸ್ಥೆ ಮಾಡಿದ್ದು, ಟಿಕೆಟ್ ಇಲ್ಲದೆ ಜನರಿಗೆ ಒಳಪ್ರವೇಶ ನಿಷೇಧಿಸಲಾಗಿದೆ.

ಸದ್ಯ ವಿತರಿಸಲಾಗಿರುವ ಟಿಕೆಟ್‍ಗಳಲ್ಲಿ ಪ್ರವೇಶ ದ್ವಾರದ ಮಾಹಿತಿ, ಪಾರ್ಕಿಂಗ್ ವಿವರ, ಕಾಯ್ದಿರಿಸಿದ ಆಸನಗಳ ಆವರಣ, ಸ್ಥಳ ನಕ್ಷೆ ಎಲ್ಲವೂ ಇರಲಿದೆ. ಬಾರ್‍ಕೋಡೆಡ್ ಹಾಗೂ ಇನ್‍ಫ್ಯೂಸ್ಡ್ ಪೇಪರ್ ಎಂಬ ಎರಡು ಬಗೆಯ ಪರಿಶೀಲನೆ ನಂತರ ಮಾತ್ರವೇ ಒಳಪ್ರವೇಶ ನೀಡಲಾಗುತ್ತದೆ. ಒಟ್ಟು 25,400 ಆಸನಗಳ ವ್ಯವಸ್ಥೆ ಮಾಡಲಾಗಿದೆ. ಇದೇ ಮಾದರಿಯಲ್ಲಿ ಪಂಜಿನಕವಾಯತು ನಡೆಯುವ ಬನ್ನಿಮಂಟಪ ಮೈದಾನದಲ್ಲಿಯೂ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಉಪ ಪೊಲೀಸ್ ಆಯುಕ್ತ ವಿಷ್ಣುವರ್ಧನ ಮಾತನಾಡಿ, ಅರಮನೆಯ ಆವರಣದಲ್ಲಿ ವಿಶೇಷ ಆವರಣಗಳಿಗೆ ನೇರ ಪ್ರವೇಶ ಕಲ್ಪಿಸಲಾಗಿದೆ. ಎಲ್ಲ ರೀತಿಯ ಅನುಕೂಲಗಳನ್ನು ಮಾಡಲಾಗಿದ್ದು, ಜನತೆ ಆವರಣಗಳನ್ನು ಬದಲಿಸದಂತೆ ಬ್ಯಾರಿಕೇಡ್ ಸಿದ್ಧಗೊಳಿಸಲಾಗಿದೆ. ಜನತೆ ಯಾವುದೇ ಹಾನಿಕಾರಕ ಪದಾರ್ಥಗಳನ್ನು ತರಬಾರದು. ಪ್ಯಾಕ್ಡ್ ಆಹಾರ ಪದಾರ್ಥಗಳಿಗೂ ಅವಕಾಶ ಇರುವುದಿಲ್ಲ ಎಂದು ತಿಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಬಿಬಿಎಂಪಿ ಮೈತ್ರಿ: ಜೆಡಿಎಸ್ ನಾಯಕರನ್ನು ಅಭಿನಂಧಿಸಿದ ರಾಮಲಿಂಗಾರೆಡ್ಡಿ