Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ದಸರಾ ಜಾತಿ, ಧರ್ಮ ಮೀರಿದ್ದು: ನಾಡೋಜ ನಿಸಾರ್ ಅಹಮದ್

ದಸರಾ ಜಾತಿ, ಧರ್ಮ ಮೀರಿದ್ದು: ನಾಡೋಜ ನಿಸಾರ್ ಅಹಮದ್
ಮೈಸೂರು , ಗುರುವಾರ, 21 ಸೆಪ್ಟಂಬರ್ 2017 (11:37 IST)
ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾಗೆ ಚಾಮುಂಡಿ‌ ಬೆಟ್ಟದಲ್ಲಿ ಅದ್ಧೂರಿ ಚಾಲನೆ ಸಿಕ್ಕಿದೆ. 407ನೇ ದಸರಾಗೆ ಖ್ಯಾತ ಕವಿ ನಿಸಾರ್ ಅಹಮದ್ ಅವರು, ತಾಯಿ ಚಾಮುಂಡಿದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.

ಚಾಮುಂಡಿಬೆಟ್ಟದಲ್ಲಿ ದಸರಾಗೆ ಚಾಲನೆ ನೀಡಿ ಮಾತನಾಡಿದ ಅವರು, ಇದಕ್ಕಿಂತ ದೊಡ್ಡ ಸಂತೋಷ ಮತ್ತೊಂದಿಲ್ಲ. ಪದ್ಮಶ್ರೀ, ನಾಡೋಜ ಪ್ರಶಸ್ತಿಗಿಂತ ದಸರಾ ಉದ್ಘಾಟನೆ ದೊಡ್ಡದು. ವಿಜಯನಗರ ಕಾಲದಿಂದ ಮೈಸೂರು ಅರಸರವರೆಗೆ ಐತಿಹಾಸಿಕವಾಗಿ ನಡೆದಿದೆ. ದಸರಾಗೆ ಧಾರ್ಮಿಕ ಬೇರು ಇದ್ದರೂ ಸಾಂಸ್ಕೃತಿಕ ರಂಬೆ ಕೊಂಬೆ ಒಡಮೂಡಿವೆ. ಅಜ್ ನಲ್ಲಿ ಮುಸ್ಲಿಮರು ಮಾತ್ರ ಸೇರ್ತಾರೆ. ಆದ್ರೆ ದಸರಾದಲ್ಲಿ ಜಾತಿ, ಧರ್ಮ ಮೀರಿ ಪ್ರಪಂಚದ ಎಲ್ಲರೂ ಸೇರುತ್ತಾರೆ. ಇದು ಕನ್ನಡದ ಅಸ್ಮಿತೆ ಸಾರುವ ಹಬ್ಬ ಎಂದು ಬಣ್ಣಿಸಿದರು.

ಸಿಎಂ ಸಿದ್ದರಾಮಯ್ಯ ನಾಡಿನ ಜನತೆಗೆ, ವಿಶೇಷವಾಗಿ ಮೈಸೂರು ಜನತೆಗೆ ದಸರಾ ಶುಭಾಶಯ ಕೋರಿದರು. ದಸರಾ ಸರಳ ಮತ್ತು ಸಾಂಪ್ರದಾಯಿಕ ಆಚರಣೆಗೆ ತೀರ್ಮಾನ ಮಾಡಲಾಗಿತ್ತು. ಭೀಕರ ಬರಗಾಲ ಹಿನ್ನೆಲೆಯಲ್ಲಿ ಸರಳ ಸಾಂಪ್ರದಾಯಿಕ ಆಚರಣೆಗೆ ತೀರ್ಮಾನ ಮಾಡಲಾಗಿತ್ತು. ಉನ್ನತ ಮಟ್ಟದ ಸಮಿತಿಯಲ್ಲಿ ದಸರಾ ಉದ್ಘಾಟಕರ ಬಗ್ಗೆ ಚರ್ಚೆಯಾದಾಗ ನಾಡೋಜ ನಿಸಾರ್ ಅಹಮದ್ ಹೆಸರು ಹೇಳಿದಾಗ ಎಲ್ಲರೂ ಒಮ್ಮತದಿಂದ ಒಪ್ಪಿದರು. ವೈಚಾರಿಕ ಚಿಂತಕರಾದ ನಿಸಾರ್ ಅಹಮದ್ ದಸರಾ ಉದ್ಘಾಟನೆಗೆ ಆಗಮಿಸಿದ್ದು ನಮಗೆ ಗೌರವ ತಂದಿದೆ. ಎಲ್ಲರೂ ಸಮಾಜದಲ್ಲಿ ಪ್ರೀತಿ ಸಹಬಾಳ್ವೆಯಿಂದ ಬದುಕಬೇಕು ಎಂದು ಅಂದುಕೊಂಡವರು. ಅವರ ಜತೆ ನನಗೆ ಹಲವು ವರ್ಷಗಳ ಒಡನಾಟವಿದೆ ಎಂದರು.

ಬಳಿಕ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಸಿಎಂ ಸಿದ್ದರಾಮಯ್ಯ ಮಾತು ಒರಟು. ಮೃದು ಹೃದಯಿ. ನಾನು ಸಿದ್ದರಾಮಯ್ಯ ಅವರನ್ನು ಹಲವಾರು ಬಾರಿ ಟೀಕೆ ಮಾಡಿದ್ದೇನೆ. ಆದ್ರೆ ಸಿದ್ದರಾಮಯ್ಯ ಅವರು ಯಾವಾಗ ಎದುರಿಗೆ ಸಿಕ್ಕಿದರೂ ಪ್ರೀತಿಯಿಂದ ಮಾತನಾಡಿಸುತ್ತಾರೆ. ಮೈಸೂರಿಗೆ ವಿಶ್ವಮಟ್ಟದಲ್ಲಿ ಸ್ಥಾನ ಕೊಡಿಸುವಲ್ಲಿ ಯದು ವಂಶದ ಪಾತ್ರ ಬಹು ದೊಡ್ಡದು ಎಂದು ಯದು ವಂಶಕ್ಕೆ ಕೃತಜ್ಞತೆ ಸಲ್ಲಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ಧಗಂಗಾ ಶ್ರೀಗಳಿಗೆ ಅನಾರೋಗ್ಯ: ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ