ನಾಡಹಬ್ಬ-ಮೈಸೂರು ದಸರಾವನ್ನು ಸರಳವಾಗಿ ಆಚರಣೆ ಮಾಡುವ ಸಾಧ್ಯತೆ ಇದ್ದು, ಜಂಬೂ ಸವಾರಿಯಲ್ಲಿ ಭಾಗವಹಿಸಲು ಯಾವ ಆನೆಗಳಿಗೆ ಕೋವಿಡ್ ಪರೀಕ್ಷೆ ಮಾಡಲು ಅರಣ್ಯ ಇಲಾಖೆ ನಿರ್ಧರಿಸಿದೆ.
ಈ ಬಾರಿ ಕೇವಲ ಮಾವುತರು, ಕಾವಡಿಗಳು, ದಸರಾ ಸಂಘಟನಾ ಸಮಿತಿ ಸದಸ್ಯರು ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳಿಗೆ ಮಾತ್ರವಲ್ಲದೆ ಆನೆಗಳಿಗೂ ಕೋವಿಡ್ ನೆಗಟಿವ್ ವರದಿ ಕಡ್ಡಾಯ ಮಾಡಲಾಗಿದೆ.
ಕಳೆದ ವರ್ಷ ಆನೆಗಳನ್ನು ಗಜಪಯಣದ ನಂತರ ಮೈಸೂರಿಗೆ ಕರೆತಂದಾಗ ಕೋ
ವಿಡ್ ಪರೀಕ್ಷಿಸಿಸಲಾಗಿತ್ತು. ಸಹಜವಾಗಿ ದಸರಾಗೆ 13-14 ಆನೆಗಳ ಬದಲಾಗಿ ಕೇವಲ ಐದು ಆನೆಗಳನ್ನು ಮಾತ್ರ ಕರೆ ತರಲಾಗಿತ್ತು. ಅಭಿಮನ್ಯು (ಚಿನ್ನದ ಅಂಬಾರಿ ಹೊತ್ತಿದ್ದ), ವಿಕ್ರಮ್, ಕಾವೇರಿ ಮತ್ತು ವಿಜಯ ಸೇರಿದಂತೆ ಮೂರು ಗಂಡು ಮತ್ತು ಎರಡು ಹೆಣ್ಣು ಬಂದಿದ್ದವು.
ಈ ವರ್ಷ, ಅರಣ್ಯ ಇಲಾಖೆ, ಪಶುವೈದ್ಯರು ಮತ್ತು ಮೈಸೂರು ಜಿಲ್ಲಾಡಳಿತದ ಅಧಿಕಾರಿಗಳು ಆನೆ ಶಿಬಿರಗಳಿಗೆ ಹೋಗಿ ಕೋವಿಡ್ ಪರೀಕ್ಷೆ ಮಾಡಲು ನಿರ್ಧರಿಸಿದ್ದಾರೆ.
"ಪಶುವೈದ್ಯರ ನೇತೃತ್ವದ ತಂಡವು ಮೈಸೂರು ಮತ್ತು ಕೊಡಗು ಆನೆ ಶಿಬಿರಗಳಿಗೆ ಹೋಗಿ, ಈ ಐದು ಆನೆಗಳ ಆರೋಗ್ಯವನ್ನು ಪರಿಶೀಲಿಸುತ್ತದೆ. ಒಮ್ಮೆ ಅವುಗಳ ವೈದ್ಯಕೀಯ ವರದಿ ಸಾಮಾನ್ಯವಾಗಿದ್ದರೆ ಮತ್ತು ಅವುಗಳ ಕೋವಿಡ್ ಪರೀಕ್ಷಾ ವರದಿ ನೆಗಟಿವ್ ಬಂದ ನಂತರ ದಸರಾ ಆಚರಣೆಯಲ್ಲಿ ಭಾಗವಹಿಸುವ ಆನೆಗಳ ಅಂತಿಮ ಪಟ್ಟಿಯನ್ನು ತಯಾರಿಸಲಾಗುತ್ತದೆ ಎಂದು ಹಿರಿಯ ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.