ನಿರ್ಮಾಪಕ ಉಮಾಪತಿಯೇ ಕಾರಣ: ಅರುಣಾ ಕುಮಾರಿ

Webdunia
ಮಂಗಳವಾರ, 13 ಜುಲೈ 2021 (19:46 IST)
ನಟ ದರ್ಶನ್ ಅವರಿಂದ ಹರ್ಷ ಅವರನ್ನು ದೂರ ಮಾಡಲು ನಿರ್ಮಾಪಕ ಉಮಾಪತಿ ಅವರೇ ಕಾರಣ. ನನ್ನ ವಿರುದ್ಧ ಆರೋಪ ಮಾಡಿದ ಪ್ರತಿಯೊಬ್ಬರ ವಿರುದ್ಧವೂ ಕೇಸ್ ಹಾಕ್ತೀನಿ ಎಂದು 25 ಕೋಟಿ ವಂಚನೆ ಯತ್ನ ಪ್ರಕರಣದ ಮಹಿಳೆ ಅರುಣಾ ಕುಮಾರಿ ಹೇಳಿದ್ದಾರೆ.
ಚಿತ್ರ ಸಾಹಿತಿ ನಾಗೇಂದ್ರ ಪ್ರಸಾದ್ ಹಾಗೂ ಉದ್ಯಮಿ ನಮಗೆ ಈ ಹಿಂದೆ ಅರುಣಾಕುಮಾರಿ 15 ಲಕ್ಷ ರೂ. ವಂಚಿಸಿದ್ದಾರೆ ಸುದ್ದಿಗೋಷ್ಠಿಯಲ್ಲಿ ಆರೋಪಿದ ಬೆನ್ನಲ್ಲೇ ಟಿವಿ ಚಾನೆಲ್ ವೊಂದಕ್ಕೆ ದೂರವಾಣಿಯಲ್ಲಿ ಮಾತನಾಡಿದ ಅವರು, ಹೆಣ್ಣು ಎಂದು ಕೂಡ ನೋಡದೇ ನನ್ನನ್ನು ಎಲ್ಲರೂ ತಮಗೆ ಬೇಕಾದಂತೆ ಬಳಸಿಕೊಂಡು ಪೇಪರ್ ನಂತೆ ಎಸೆದಿದ್ದಾರೆ ಎಂದು ಆರೋಪಿಸಿದರು.
ನನ್ನನ್ನು ದರ್ಶನ್ ಗೆ ಪರಿಚಯ ಮಾಡಿಸಿದ್ದೇ ಉಮಾಪತಿ. ನನ್ನನ್ನು ಬ್ಯಾಂಕ್ ಮ್ಯಾನೇಜರ್ ಅಂತ ಹೇಳಿದ್ದು ಕೂಡ ಅವರೇ. ನನಗೆ ಸ್ವಂತ ಮನೆ ಕೊಡಿಸುತ್ತೇನೆ ಎಂದು ನಂಬಿಸಿ ಈ ಕೆಲಸ ಮಾಡಿಸಿದರು. ನಾನು ಯಾವುದೇ ಕಳ್ಳತನ, ದಾಖಲೆ ಫೋರ್ಜರಿ ಮಾಡಿಲ್ಲ. ದರ್ಶನ್ ಭೇಟಿ ವೇಳೆ ಹೇಗೆ ನಡೆದುಕೊಳ್ಳಬೇಕು ಹೇಗೆ ಮಾತನಾಡಬೇಕು ಎಂದು ಉಮಾಪತಿ ಹೇಳಿಕೊಡುತ್ತಿದ್ದ ಎಂದು ಅರುಣಾ ಕುಮಾರಿ ವಿವರಿಸಿದರು.
ಉಮಾಪತಿ ಜೊತೆಗಿನ ಎಲ್ಲಾ ಚಾಟ್ ಹಿಸ್ಟರಿಯನ್ನೂ ತೆಗೆಸುತ್ತೇನೆ. ನಕಲಿ ಐಡಿ ಕಾರ್ಡ್ ಕೂಡ ನಾನು ಮಾಡಿದ್ದಲ್ಲ. ಎಲ್ಲಾ ದಾಖಲೆಗಳನ್ನು ಪಡೆದ ನಂತರ ಎಲ್ಲವನ್ನೂ ಬಹಿರಂಗಪಡಿಸುತ್ತೇನೆ. ಸದ್ಯದ ಪರಿಸ್ಥಿತಿ ಸರಿಯಿಲ್ಲ ಎಂದು ಅರುಣಾಕುಮಾರಿ ಹೇಳಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕರ್ನಾಟಕದಲ್ಲಿ ಬಿಜೆಪಿ ಗತವೈಭವ ಮರುಕಳಿಸಲು ಶ್ರಮಿಸೋಣ: ವಿಜಯೇಂದ್ರ

ಭಾರತ ಕೇವಲ ಎಐ ಭಾಗವಲ್ಲ, ಮುನ್ನಡೆಸಿಕೊಂಡು ಹೋಗುತ್ತಿದೆ: ಪ್ರಧಾನಿ ಮೋದಿ

ಸದನದಲ್ಲೇ ಕದ್ದು ಮುಚ್ಚಿ ತಂಬಾಕು ಸೇವಿಸಿದ್ರಾ ಬಿಹಾರ ಡಿಸಿಎಂ ಸಾಮ್ರಾಟ್ ಚೌಧರಿ Video

Gold Price today: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

ಮುಂದಿನ ಸುದ್ದಿ