Publish Date: Wed, 02 Aug 2023 (17:54 IST)
Updated Date: Wed, 02 Aug 2023 (18:57 IST)
ದಲಿತ ಸಮುದಾಯಕ್ಕೆ ಮೀಸಲಿಟ್ಟ ಹಣ ಗ್ಯಾರಂಟಿಗಳಿಗೆ ಬಳಕೆ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್ ಸದಸ್ಯ ಚಲವಾದಿ ನಾರಾಯಣಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಒಬ್ಬ ದಲಿತ ವಿರೋಧಿ. ಅಧಿಕಾರಕ್ಕೆ ಬರಲು ಕಾಂಗ್ರೆಸ್ 5 ಗ್ಯಾರಂಟಿಗಳನ್ನು ಕೊಡ್ತು. ಗ್ಯಾರಂಟಿಗಳಿಗೆ ಹಣ ಎಲ್ಲಿಂದ ಬರುತ್ತೆ ಅಂದಾಗ, ಬಿಜೆಪಿಯ 40 ಕಮಿಷನ್ ಬೇಕಾದಷ್ಟು ಇದೆ.ಅದರಲ್ಲಿ ನಾವು ಗ್ಯಾರಂಟಿಗಳನ್ನು ಮಾಡ್ರೀವಿ ಅಂದಿದ್ರಿ. ಆದರೆ ದಲಿತರ ಹಣಕ್ಕೆ ಯಾಕೆ ನೀವು ಕನ್ನ ಹಾಕ್ತಿದ್ದೀರಿ ಎಂದು ಪ್ರಶ್ನಿಸಿದ್ರು. ಇಂತಹ ಸುಳ್ಳು ಹೇಳಿ ಯಾವ ಕಾರಣಕ್ಕೆ ಸರ್ಕಾರ ಮಾಡಬೇಕಿತ್ತು. ನಮಗೆ ಬೇಕಿರೋದು ಶಿಕ್ಷಣ, ಉದ್ಯೋಗ, ಆರ್ಥಿಕ ಭದ್ರತೆ ಮತ್ತೆ ಆರೋಗ್ಯ ರಕ್ಷಣೆ ಇರಬೇಕು. ನಿಮ್ಮ ಬಿಟ್ಟಿ ಭಾಗ್ಯ ನಮಗೆ ಬೇಕಾಗಿಲ್ಲ.
ದಲಿತರ ಹೆಸರೇಳಿ, ಬೇರೆ ಬೇರೆ ಇಲಾಖೆಗಳಿಗೆ ಹಣ ಕೊಟ್ಟಿದ್ದೀರಿ. ಕೆರೆ ನೀರನ್ನು ಕೆರೆಗೆ ಚೆಲ್ಲೋಕೆ ಒಬ್ಬ ಸಿಎಂ ಬೇಕಾ ಎಂದು ವಾಗ್ದಾಳಿ ನಡೆಸಿದ್ರು. ದಲಿತರಿಗೆ ಕಾಂಗ್ರೆಸ್ನಿಂದ ಮಹಾ ಮೋಸ ಆಗಿದೆ. ಕಾಂಗ್ರೆಸ್ ಅನ್ನೋದೇ ಮಹಾ ವಂಚನೆ. ದಲಿತ ಸಮುದಾಯವನ್ನು ಸಂಹಾರ ಮಾಡಲು ಸಿದ್ದರಾಮಯ್ಯ ಹೊರಟಿದ್ದಾರೆ ಎಂದರು.
geetha
Publish Date: Wed, 02 Aug 2023 (17:54 IST)
Updated Date: Wed, 02 Aug 2023 (18:57 IST)