ಕೊಪ್ಪಳ ಜಿಲ್ಲೆಯ ಈ ಗ್ರಾಮದಲ್ಲಿ ದಲಿತರಿಗೆ ದೇವಸ್ಥಾನ ಪ್ರವೇಶ ನಿಷೇಧ ಮಾಡಲಾಗಿದೆ. ದಲಿತ ಸಮುದಾಯದವರು ದೇವಾಲಯ ಪ್ರವೇಶಿಸುವಂತಿಲ್ಲ ಎಂದು ಕಟ್ಟಾತ್ರೆ ಹೊರಡಿಸಲಾಗಿದೆ.
ದೇವಸ್ಥಾನ ದ ಒಳಗೆ ಬೇಡ ಪಲ್ಲಕ್ಕಿ ಸೇವೆ ಮಾಡಲು ಅವಕಾಶ ನೀಡಿ ಎಂದು ಕೇಳಿದ ದಲಿತ ಯುವಕರಿಗೆ ಥಳಿಸಲಾಗಿದೆ. ಸಂವಿಧಾನ ಬದ್ದ ಹಕ್ಕು ಎಂದುಪ್ರಶ್ನೆ ಮಾಡಿದ ದಲಿತ ಯುವಕರಿಗೆ ಸುವರ್ಣಿಯರು ಹಲ್ಲೆ ಮಾಡಿದ್ದಾರೆ. ಜಿಲ್ಲೆಯ ಮೈನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.
ಮೈನಳ್ಳಿಯ ಗ್ರಾಮ ದೇವತೆ ಬುಡ್ಡಮ್ಮ ದೇವಿಯ ಜಾತ್ರೆಯಲ್ಲಿ ದಲಿತರು ದೇವಸ್ಥಾನ ಪ್ರವೇಶ ಮಾಡಿದ್ದಾರೆ. ಹೀಗಾಗಿ 4 ಜನ ದಲಿತ ಯುಕರ ಮೇಲೆ ಹಲ್ಲೆ ಮಾಡಿರುವ ವಿಷಯ ತಡವಾಗಿ ಬೆಳಕಿಗೆ ಬಂದಿದೆ. ಜಾತ್ರೆ ನಡೆದ ಸಂದರ್ಭದಲ್ಲಿ ಘಟನೆ ನಡೆದಿದೆ.
ಘಟನೆ ಹಿನ್ನಲೆ 30 ಕ್ಕೂ ಹೆಚ್ಚು ಸವರ್ಣಿಯರನ್ನು ಅಟ್ರಾಸಿಟಿ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಗ್ರಾಮದಲ್ಲಿ ಬೂದಿ ಮುಚ್ಚಿದ ಕೆಂಡದಂತಹ ಬಿಗುವಿನ ವಾತವರಣವಿದೆ ಎನ್ನಲಾಗಿದೆ.
ಅನ್ ಟಚೇಬಲಿಟಿ ಇನ್ನೂ ಜೀವಂತವಾಗಿ ಮೈನಹಳ್ಳಿ ಗ್ರಾಮದಲ್ಲಿದೆ. ದಲಿತರಿಗೆ ಹೊಟೇಲ್, ದೇವಸ್ಥಾನ, ಕಟಿಂಗ್ ಶಾಪ್‌ಗಳಲ್ಲಿ ಪ್ರವೇಶ ಇಲ್ಲಾ. ಸ್ವಾತಂತ್ರ್ಯ ಸಿಕ್ಕು ಇಷ್ಟು ವರ್ಷಗಳು ಕಳೆದರೂ ಕೊಪ್ಪಳ ಜಿಲ್ಲೆಯಲ್ಲಿ ದಲಿತರು ಇನ್ನೂ ಗುಲಾಮಗಿರಿಯಲ್ಲಿದ್ದಾರೆ. ಮುಂಜಾಗ್ರತಾ ಕ್ರಮವಾಗಿ 2 ಡಿಎಆರ್ ತುಕಡಿಗಳ ನಿಯೋಜನೆ ಮಾಡಲಾಗಿದೆ. ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.