Publish Date: Thu, 06 May 2021 (09:01 IST)
Updated Date: Thu, 06 May 2021 (09:03 IST)
ಬೆಂಗಳೂರು: ಕೊರೋನಾ ಇನ್ನೂ ನಿಯಂತ್ರಣಕ್ಕೆ ಬಾರದ ಹಿನ್ನಲೆಯಲ್ಲಿ ಲಾಕ್ ಡೌನ್ ವಿಸ್ತರಣೆಯಾಗುವ ಬಗ್ಗೆ ಮಾತುಗಳು ಕೇಳಿಬರುತ್ತಿವೆ.
ಆದರೆ ಕಳೆದ ಒಂದು ವಾರದಿಂದ ಲಾಕ್ ಡೌನ್ ಅನುಭವಿಸಿ ವ್ಯಾಪಾರಿಗಳು, ಕಾರ್ಮಿಕರು ತೀವ್ರ ಸಂಕಷ್ಟದಲ್ಲಿದ್ದಾರೆ. ಇನ್ನಷ್ಟು ದಿನ ಲಾಕ್ ಡೌನ್ ಮುಂದುವರಿದರೆ ದಿನಗೂಲಿ ಕಾರ್ಮಿಕರ ಪಾಡೇನು ಎಂಬ ಮಾತು ಕೇಳಿಬಂದಿದೆ.
ಈಗಾಗಲೇ ಸರ್ಕಾರ ಕೈಗಾರಿಕೆಗಳಿಗೆ ಅನುಮತಿ ಕೊಟ್ಟಿದೆ. ಆದರೆ ಸಾಗಣೆಗೆ ಸಂಚಾರ ವ್ಯವಸ್ಥೆಯೇ ಇಲ್ಲದೇ ಹಲವು ಸಣ್ಣ ಉದ್ಯಮಗಳು ಬಾಗಿಲು ಬಂದ್ ಮಾಡಿ ಕುಳಿತಿವೆ. ಇದೇ ರೀತಿ ಮುಂದುವರಿದರೆ ಇನ್ನಷ್ಟು ಜನರು ಬದುಕು ಕಳೆದುಕೊಳ್ಳಬೇಕಾಗುತ್ತದೆ.