Webdunia - Bharat's app for daily news and videos

Install App

ಕಾಂಗ್ರೆಸ್ ಗೆ ಮತ ಹಾಕದವರಿಗೆ ಬಿಪಿಎಲ್ ಕಾರ್ಡ್ ರದ್ದು: ಸಿಟಿ ರವಿ ಗಂಭೀರ ಆರೋಪ

Krishnaveni K
ಮಂಗಳವಾರ, 19 ನವೆಂಬರ್ 2024 (14:56 IST)
ಬೆಂಗಳೂರು: ಬಡವರ 14 ಲಕ್ಷ ಬಿಪಿಎಲ್ ಕಾರ್ಡ್ ಕಿತ್ತುಕೊಳ್ಳುವ ಘೋರ ಅಪರಾಧವನ್ನು ರಾಜ್ಯ ಸರಕಾರ ಮಾಡಿದೆ. ಅದರಲ್ಲೂ ನಮಗೆ ಮತ ಹಾಕಿದ್ದಾರಾ ಎಂದು ಜಾತಿ, ಕೋಮು ಹುಡುಕಿ ಬಿಪಿಎಲ್ ಕಾರ್ಡ್ ರದ್ದು ಮಾಡುತ್ತಿರುವ ದೂರುಗಳಿವೆ ಎಂದು ವಿಧಾನಪರಿಷತ್ ಸದಸ್ಯ ಮತ್ತು ಬಿಜೆಪಿ ನಿಕಟಪೂರ್ವ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಆಕ್ಷೇಪಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಬಡವರ ಅನ್ನಕ್ಕೂ ಕನ್ನ ಹಾಕುವ ಪರಮ ಅನ್ಯಾಯ ಇದಾಗಿದೆ ಎಂದು ಟೀಕಿಸಿದರು. ಜಾತಿ ಹುಡುಕಿ ಕಾರ್ಡ್ ರದ್ದು ಮಾಡಿದ್ದನ್ನು ಸೋಷಿಯಲ್ ಮೀಡಿಯದಲ್ಲಿ ನೋಡಿದ್ದೇನೆ. ಬಡವರ ಅನ್ನಕ್ಕೂ ಕನ್ನ ಹಾಕುವ ಸರಕಾರ ಇದೆಂದು ಆರೋಪಿಸಿದರು.

ಎಐಸಿಸಿ ಅಧ್ಯಕ್ಷ ಖರ್ಗೆಯವರು ನಿನ್ನೆ ಆರೆಸ್ಸೆಸ್, ಬಿಜೆಪಿಯನ್ನು ವಿಷ ಸರ್ಪಕ್ಕೆ ಹೋಲಿಸಿದ್ದಾರೆ. ಅನುಭವ ಪಕ್ವತೆಯನ್ನು ಪಡೆದುಕೊಳ್ಳಬೇಕು. ಹಿರಿತನಕ್ಕೆ ತಕ್ಕ ಮಾತು ಅದಲ್ಲ; ಅವರ ಮಾತುಗಳು ಹುಚ್ಚುನಾಯಿ ಕಡಿತಕ್ಕೆ ಒಳಗಾದವರುÀ ಆಡುವ ಥರ ಮಾತಿನಂತಿತ್ತು. ಮಲ್ಲಿಕಾರ್ಜುನ ಖರ್ಗೆಯವರು ಆ ಮಾತನಾಡಿದ್ದಾರೋ ಅಥವಾ ಕಾಂಗ್ರೆಸ್ಸಿನ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಖರ್ಗೆಯವರ ಮೂಲಕ ಈ ಮಾತನ್ನಾಡಿಸಿದ್ದಾರೋ ಗೊತ್ತಿಲ್ಲ ಎಂದ ಅವರು, ನಿಮ್ಮ ಮಾತು ಸಂವಿಧಾನದ ಮೇಲೆ ನಂಬಿಕೆ ಇಟ್ಟವರ ಮಾತಲ್ಲ. ಹೊಡಿ, ಬಡಿ ಕೊಲ್ಲು ಎಂಬ ತಾಲಿಬಾನಿಗಳ ಮಾತಿಗೆ ವಿಷಾದ ವ್ಯಕ್ತಪಡಿಸಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.

ಸಂವಿಧಾನ ಗೌರವ ದಿವಸ ಆಚರಿಸಲು ಪ್ರಧಾನಿ ಮೋದಿಜೀ ಅವರು ಕ್ರಮ ಕೈಗೊಂಡಿದ್ದಾರೆ. ಡಾ.ಅಂಬೇಡ್ಕರರು ಸತ್ತಾಗಲೂ ಕಾಂಗ್ರೆಸ್ ಸರಕಾರ ಅವಮಾನ ಮಾಡಿದ್ದನ್ನು, ಅವರು ಚುನಾವಣೆಗೆ ನಿಂತಾಗ ಸೋಲಿಸಿದ್ದನ್ನು ಹಾಗೂ ಕಾಂಗ್ರೆಸ್ ಪಕ್ಷವು ಅವರ ಹೆಸರನ್ನು ಭಾರತರತ್ನಕ್ಕೆ ಪರಿಗಣಿಸದೆ ಇದ್ದುದನ್ನು ಜನರಿಗೆ ತಿಳಿಸುತ್ತೇವೆ. ಸಂವಿಧಾನ ಸಂರಕ್ಷಣೆ, ಸಂವಿಧಾನದ ಸಮ್ಮಾನದ ಅಭಿಯಾನ ಕೈಗೆತ್ತಿಕೊಂಡಿದ್ದು, ಈ ಎಲ್ಲ ಸಂಗತಿಗಳನ್ನು ಜನರ ಮುಂದಿಡಲಿದ್ದೇವೆ ಎಂದು ವಿವರಿಸಿದರು. ತುರ್ತು ಪರಿಸ್ಥಿತಿ ಮೂಲಕ ಕಾಂಗ್ರೆಸ್ಸಿನ ಅನ್ಯಾಯವನ್ನು ತಿಳಿಸಲಿದ್ದೇವೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷಕ್ಕೆ ಸಂವಿಧಾನದ ಕುರಿತು ನಿಜವಾದ ಪ್ರೀತಿ ಇಲ್ಲ; ನಾಟಕ ಮಾಡುತ್ತ ಬಂದಿದೆ. ಆಡಳಿತದಲ್ಲಿ ಇದ್ದಾಗ ಕೂಡ ಅದು ಸಂವಿಧಾನಕ್ಕೆ ಮತ್ತು ಅಂಬೇಡ್ಕರರಿಗೆ ಗೌರವ ಕೊಟ್ಟಿಲ್ಲ ಎಂದು ಟೀಕಿಸಿದರು.

ನಕ್ಸಲಿಸಂ ಎಂದರೆ ಹಿಂಸೆಯನ್ನು ಪ್ರಚೋದಿಸುವುದು ಮತ್ತು ಅದು ಪ್ರಜಾಪ್ರಭುತ್ವ ವಿರೋಧಿ. ನಕ್ಸಲರ ಬಗ್ಗೆ ಪ್ರಜಾಪ್ರಭುತ್ವ ಮತ್ತು ಸಂವಿಧಾನ ವಿರೋಧಿಗಳು ಮಾತ್ರ ಕರುಣೆ ತೋರಲು ಸಾಧ್ಯ; ನಕ್ಸಲರು ನಕ್ಸಲರೇ; ಅವರ ಬಗ್ಗೆ ಯಾವ ಸಿಂಪಥಿಯೂ ಇಲ್ಲ ಎಂದು ಪ್ರಶ್ನೆಗೆ ಉತ್ತರ ನೀಡಿದರು. ನಕ್ಸಲರು ಎಡಪಂಥೀಯ ಭಯೋತ್ಪಾದಕರಷ್ಟೇ ಎಂದರು.

ರಾಜ್ಯದಲ್ಲಿ ಅಭಿವೃದ್ಧಿ ಸಂಪೂರ್ಣ ಸ್ಥಗಿತವಾಗಿದೆ. ಅಭಿವೃದ್ಧಿಗೆ ಅನುದಾನ ಕೇಳಿದರೆ, ಮುಖ್ಯಮಂತ್ರಿಗಳು ಎಲ್ಲಿಂದ ದುಡ್ಡು ತರೋದು; ಸ್ವಲ್ಪ ತಡ್ಕೊಳ್ಳಿ ಎನ್ನುತ್ತಾರೆ. ಹಾಗಾಗಿ ಇದು ಹೊಸದೇನಲ್ಲ; ಅದಕ್ಕಾಗಿ ಬಡವರ ಅನ್ನವನ್ನೂ ಬಿಪಿಎಲ್ ಕಾರ್ಡ್ ರದ್ದು ಮೂಲಕ ಕಿತ್ತುಕೊಳ್ಳಲು ಹೊರಟಿದ್ದಾರೆ ಎಂದು ದೂರಿದರು.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Arecanut price today: ಬೆಲೆ ಏರಿಕೆ ನಿರೀಕ್ಷೆಯಲ್ಲಿದ್ದ ಅಡಿಕೆ ಬೆಳೆಗಾರರಿಗೆ ನಿರಾಸೆ

Gold Price today: ಚಿನ್ನ ಖರೀದಿದಾರರಿಗೆ ಇಂದು ಮತ್ತೆ ಆತಂಕ

Mamata Banerjee:ಪಾಕಿಸ್ತಾನ ವಿರುದ್ಧ ವಿಶ್ವಕ್ಕೆ ಮನವರಿಕೆ ಮಾಡಲು ನಮ್ಮ ಸಂಸದರನ್ನು ಕಳಿಸಲ್ಲ ಎಂದ ಮಮತಾ ಬ್ಯಾನರ್ಜಿ

Pakistan: ಉಗ್ರ ಸೈಫುಲ್ಲಾ ಮೃತದೇಹಕ್ಕೆ ರಾಷ್ಟ್ರಧ್ವಜ: ಪಾಕಿಸ್ತಾನದ ನಾಟಕ ಬಯಲು

India Pakistan: ಭಾರತದ ವಿರುದ್ಧ ಸೋತು ಸುಣ್ಣವಾದ ಬಳಿಕ ಚೀನಾ ಬಳಿ ಓಡಿದ ಪಾಕಿಸ್ತಾನ

ಮುಂದಿನ ಸುದ್ದಿ
Show comments