ಬೆಂಗಳೂರು : ಕಾಂಗ್ರೆಸ್ ಮಾಡಿದ ಸಾಲವನ್ನು ತೀರಿಸುತ್ತಿರುವ ಕಾರಣ ಅಗತ್ಯ ವಸ್ತುಗಳ ಬೆಲೆ ಜಾಸ್ತಿಯಾಗಿದೆ ಎಂದಿರುವ ಸಿ.ಟಿ.ರವಿ ಅವರು ಅರೆಹುಚ್ಚನಂತೆ ವರ್ತಿಸುತ್ತಿದ್ದಾರೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಪೊಳ್ಳು ಮಾತುಗಳಿಂದಲೇ ಕುಖ್ಯಾತರಾಗಿರುವ ಸಿ.ಟಿ.ರವಿ, 2014ರ ವರೆಗೆ ಅಧಿಕಾರ ನಡೆಸಿದ್ದ ಸರಕಾರಗಳು ಮಾಡಿದ್ದ ಸಾಲ 54 ಲಕ್ಷ ಕೋಟಿ ರೂ. ಆದರೆ, ಮೋದಿಯವರು 7 ವರ್ಷಗಳಲ್ಲಿ ಮಾಡಿರುವ ಸಾಲ 35 ಲಕ್ಷ ಕೋಟಿ ರೂ. ಆಗಿದೆ ಎಂದರು.
ಯುಪಿಎ ಅವಧಿಯಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರೆಲ್ಗೆ 120 ಡಾಲರ್ ತಲುಪಿದಾಗ, ಜನರ ಮೇಲೆ ಹೊರೆ ತಪ್ಪಿಸಲು 1 ಲಕ್ಷದ 34 ಸಾವಿರ ಕೋಟಿ ರೂ.ಯ ತೈಲ ಬಾಂಡ್ ಖರೀದಿಸಲಾಗಿತ್ತು. ಏಳು ವರ್ಷಗಳಲ್ಲಿ ತೈಲದ ಮೇಲಿನ ತೆರಿಗೆಯಿಂದಲೇ ಕೇಂದ್ರ ಸರಕಾರ, 23 ಲಕ್ಷ ಕೋಟಿ ರೂ.ಗೂ ಹೆಚ್ಚು ಹಣ ಸಂಗ್ರಹಿಸಿದೆ. ಇದರಲ್ಲಿ ತೈಲ ಬಾಂಡ್ಗೆ ಪಾವತಿಸಿರುವುದು 9 ಕೋಟಿ ಮಾತ್ರ. ಉಳಿದ ಹಣ ಯಾರ ಖಜಾನೆ ಸೇರಿದೆ ಸಿ.ಟಿ.ರವಿಯವರೇ ಎಂದು ಪ್ರಶ್ನಿಸಿದ್ದಾರೆ.