Publish Date: Wed, 20 Jul 2022 (19:10 IST)
Updated Date: Wed, 20 Jul 2022 (18:13 IST)
ಮಂತ್ರಿ ಗ್ರೂಪ್ ಬೆನ್ನಲ್ಲೇ ರಾಜಧಾನಿ ಬೆಂಗಳೂರಿನ ಮತ್ತೊಂದು ಗ್ರೂಪ್ ದೋಖಾ ಬಯಲಾಗಿದೆ. ಈ ಬಾರಿ ಓಝೋನ್ ಗ್ರೂಪ್ ಗ್ರಾಹಕರಿಗೆ ವಂಚನೆ ಮಾಡಿದ್ದು, ಫ್ಲ್ಯಾಟ್, ಸೈಟ್ ಕೊಡೋ ನೆಪದಲ್ಲಿ 1000 ಕೋಟಿ ವಂಚನೆ ಮಾಡಿದೆ. ರಿಯಲ್ ಎಸ್ಟೇಟ್ ವ್ಯವಹಾರ ನಡೆಸ್ತಿರೋ ಓಝೋನ್ ಗ್ರೂಪ್ ಸಾವಿರಾರು ಜನರಿಗೆ ಕೋಟಿ ಕೋಟಿ ದೋಖಾ ಮಾಡಿದೆ.ಹಿನ್ನೆಲೆಯಲ್ಲಿ ಫ್ರಾಡ್ ಓಝೋನ್ ಗ್ರೂಪ್ನ ಮಾಸ್ಟರ್ ಮೈಂಡ್ ವಾಸುದೇವ್ ವಿರುದ್ಧ ಅಶೋಕ್ ನಗರ ಸೇರಿದಂತೆ ಹಲವು ಠಾಣೆಗಳಲ್ಲಿ ಹತ್ತಾರು FIR ಗಳು ದಾಖಲಾಗಿದೆ. ಹೊಸ FIR ನಲ್ಲಿ 80 ಕೋಟಿ ವಂಚನೆ ಬಗ್ಗೆ ಗ್ರಾಹಕರು ದೂರು ನೀಡಿದ್ಧಾರೆ.
ರಿಯಲ್ ಎಸ್ಟೇಟ್ ಹೆಸರಲ್ಲಿ 80 ಕೋಟಿಗೂ ಹೆಚ್ಚು ವಂಚನೆ ಮಾಡಲಾಗಿದೆ. ಅಮಾಯಕ ಜನರನ್ನ ಟಾರ್ಗೆಟ್ ಮಾಡಿ ಕೋಟಿ ಕೋಟಿ ವಂಚನೆ ಮಾಡಿದ್ದಾರೆ. ದೇವನಹಳ್ಳಿಯ ಕನ್ನಮಂಗಲ ಗ್ರಾಮ, ಪೂಜನಹಳ್ಳಿಯಲ್ಲಿ ವಂಚನೆ ನಡೆದಿದ್ದು, ಕೋಟಿ ಕೋಟಿ ಲಾಭ ಬರೋದಾಗಿ ನಂಬಿಸಿ ಇನ್ವೆಸ್ಟ್ಮೆಂಟ್ ಮಅಡಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಓಝೋನ್ ಗ್ರೂಪ್ ನಿರ್ದೇಶಕರಾದ ವಾಸುದೇವನ್ ಸತ್ಯಮೂರ್ತಿ, ಸತ್ಯಮೂರ್ತಿ ಸಾಯಿ ಪ್ರಸಾದ್, ರಾಜೀವ್ ಬಂಡಾರಿ, ಶ್ರೀನಿವಾಸನ್ ಗೋಪಾಲನ್, ನೀಮ್ಚಂದ್, ದುರುಬಾಕುಲ ವಂಶಿ ಸಾಯಿ ವಿರುದ್ಧ FIR ದಾಖಲಾಗಿದೆ.