ಪ್ರತಿಷ್ಠಿತ ಪ್ರಶಸ್ತಿಗಾಗಿ ಖ್ಯಾತ ವನ್ಯಜೀವಿ ತಜ್ಞ ಉಲ್ಲಾಸ್ ಕಾರಂತ್ ಅವರ ಪುತ್ರಿ ಕೃತಿ ಕಾರಂತ್ ಸುಳ್ಳು ದಾಖಲೆ ಕೊಟ್ಟು ಕೋಟ್ಯಂತರ ರೂಪಾಯಿ ಮೌಲ್ಯದ ಪ್ರಶಸ್ತಿ ಪಡೆದುಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಪ್ರತಿಷ್ಠಿತ ರೋಲೆಕ್ಸ್ ಪ್ರಶಸ್ತಿಗಾಗಿ ವನ್ಯಜೀವಿ ತಜ್ಞೆ ಕೃತಿ ಕಾರಂತ್ ನಕಲಿ ದಾಖಲೆ ಸಲ್ಲಿಸಿದ್ದಾರೆ. ಹೀಗಂತ ಅರಣ್ಯ ಇಲಾಖೆ ಆರೋಪ ಮಾಡಿದ್ದು, ಕೃತಿ ಕಾರಂತ್ ವಿರುದ್ಧ ಪ್ರಕಟಣೆ, ಟ್ವಿಟ್ಟರ್, ಫೇಸಬುಕ್ ಗಳಲ್ಲಿ ವಾರ್ ಶುರುಮಾಡಿಕೊಂಡಿದೆ.
2019ನೇ ಸಾಲಿನ ಅಂತರಾಷ್ಟ್ರೀಯ ರೋಲೆಕ್ಸ್ ಅವಾರ್ಡ್ ನ್ನು ಕೃತಿ ಕಾರಂತ್ ಪಡೆದುಕೊಂಡಿದ್ದಾರೆ. ನಕಲಿ ದಾಖಲೆ ಕೊಟ್ಟು 1. 5 ಕೋಟಿ ಮೌಲ್ಯದ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಹೀಗಂತ ಅರಣ್ಯ ಇಲಾಖೆ ಆರೋಪ ಮಾಡಿದೆ.