Select Your Language

Notifications

webdunia
webdunia
webdunia
webdunia

‘ಬಿಜೆಪಿಯಿಂದ ಸಿ.ಪಿ.ಯೋಗೇಶ್ವರ್ ನಿರ್ಲಕ್ಷ್ಯ’ - ಬಿಜೆಪಿಗೆ ಕೈ ಕೊಡ್ತಾರಾ ಸೈನಿಕ?

ಸಿ.ಪಿ.ಯೋಗೇಶ್ವರ್
ಬಿಜೆಪಿಯಿಂದ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ ಅನ್ನೋ ಮಾತುಗಳು ಮತ್ತೆ ಹರಿದಾಡಲಾರಂಭಿಸಿವೆ.

ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ರನ್ನು ಬಿಜೆಪಿ ನಿರ್ಲಕ್ಷ್ಯ ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರೋ ಡಿಸಿಎಂ ಅಶ್ವಥ್ ನಾರಾಯಣ್, ಬಿಜೆಪಿ ಅವರನ್ನ ನಿರ್ಲಕ್ಷ್ಯ ಮಾಡುವುದಿಲ್ಲ. ಅವರು ನಮ್ಮ ಪಕ್ಷದ ನಾಯಕರು. ಮುಂದಿನ ದಿನಗಳಲ್ಲಿ ಅವರಿಗೆ ಎಲ್ಲವೂ ಒಳ್ಳೆಯದಾಗಲಿದೆ. ಪಕ್ಷದಲ್ಲಿ ಉನ್ನತ ಸ್ಥಾನಮಾನ ಸಿಗಲಿದೆ. ಯಾರು ಕೂಡ ಈ ಬಗ್ಗೆ ಅನುಮಾನ ಪಡುವುದು ಬೇಡ ಅಂತ ಹೇಳಿದ್ದಾರೆ.

ಚನ್ನಪಟ್ಟಣದಲ್ಲಿ ನೀರಾವರಿ ಯೋಜನೆ ಜಾರಿಯಾಗಿದ್ದು ಬಿಜೆಪಿ ಸರ್ಕಾರದಲ್ಲಿ. ಹಾಗಾಗಿ ಅವರಿಗೆ ಪಕ್ಷ ಯಾವುತ್ತು ನಿರ್ಲಕ್ಷ್ಯ ಮಾಡಲ್ಲ. ಸಿ.ಪಿ.ಯೋಗೇಶ್ವರ್ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರೋದಿಲ್ಲ. ಅವರು ಬಿಜೆಪಿ ಪಕ್ಷದ ಸದೃಢ ನಾಯಕರು. ಯಾವುದೇ ಕಾರಣಕ್ಕೂ ಅವರು ಕಾಂಗ್ರೆಸ್ ಪಕ್ಷಕ್ಕೆ ಹೋಗಲ್ಲ ಅಂತ ಡಿಸಿಎಂ ಹೇಳಿದ್ದಾರೆ.  



 

Share this Story:

Follow Webdunia kannada

ಮುಂದಿನ ಸುದ್ದಿ

‘ಟಿಪ್ಪು ಸುಲ್ತಾನ್ ಹೆಸರೂ ಭಾರತ ರತ್ನಕ್ಕೆ ಶಿಫಾರಸ್ಸು’