ಬೆಂಗಳೂರು: ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಮುಂದೆ ಸಚಿವ ಸಿಪಿ ಯೋಗೇಶ್ವರ್ ದೂರುಗಳ ಸರಮಾಲೆಯನ್ನೇ ಹರಿಸಿದ್ದಾರೆ. ಬಿಎಸ್ ವೈ ವಿಪಕ್ಷ ನಾಯಕರ ಮಾತಿಗೆ ಹೆಚ್ಚು ಮಣೆ ಹಾಕುತ್ತಾರೆ ಎನ್ನುವುದು ಇದರಲ್ಲಿ ಮುಖ್ಯವಾಗಿದೆ.
ವಿಪಕ್ಷ ನಾಯಕ ಡಿಕೆ ಶಿವಕುಮಾರ್, ಎಚ್ ಡಿ ಕುಮಾರಸ್ವಾಮಿ ಹೇಳಿದಂತೆ ರಾಮನಗರಕ್ಕೆ ಅಧಿಕಾರಿಗಳನ್ನು ನಿಯೋಜಿಸುತ್ತಾರೆ. ಅವರ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ಕೊಡ್ತಿದ್ದಾರೆ ಎಂದು ಯೋಗೇಶ್ವರ ದೂರಿದ್ದಾರೆ.
ವಿಪಕ್ಷಗಳ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಇದರಿಂದಾಗಿ ಹಳೆ ಮೈಸೂರು ಭಾಗದಲ್ಲಿ ಪಕ್ಷದ ಸ್ಥಿತಿ ಹೀನಾಯವಾಗಿದೆ. ಅಲ್ಲದೆ, ಸಿಎಂ ಪುತ್ರ ವಿಜಯೇಂದ್ರ ಹಸ್ತಕ್ಷೇಪ ಅಧಿಕವಾಗಿದೆ. ಬಜೆಟ್ ನ ಬಹುಪಾಲು ಹಣವಿರುವ ಖಾತೆಗಳೆಲ್ಲಾ ಸಿಎಂ ಬಳಿಯಿದೆ. ಇದನ್ನು ವಿಜಯೇಂದ್ರ ಅವರೇ ನಿರ್ವಹಿಸುತ್ತಿದ್ದಾರೆ. ಈ ರೀತಿಯಾದ್ರೆ ಮುಂದಿನ ಚುನಾವಣೆಗೆ ಕಷ್ಟ ಎಂದಿದ್ದಾರೆ.