Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ದೇಶದಲ್ಲಿ ಕೋವಿಡ್ ರೂಪಾಂತರಿ `ಕಪ್ಪಾ’ ವೈರಸ್ 2 ಪ್ರಕರಣ ಪತ್ತೆ

ದೇಶದಲ್ಲಿ ಕೋವಿಡ್ ರೂಪಾಂತರಿ `ಕಪ್ಪಾ’ ವೈರಸ್ 2 ಪ್ರಕರಣ ಪತ್ತೆ
bangalore , ಶುಕ್ರವಾರ, 9 ಜುಲೈ 2021 (18:37 IST)
ವ್ಯಾಪಕವಾಗಿ ಹರಡಬಲ್ಲ ಕೋವಿಡ್ ರೂಪಾಂತರಿ ಕಪ್ಪಾ ವೈರಸ್ ನ ಎರಡು ಪ್ರಕರಣಗಳು ಉತ್ತರ ಪ್ರದೇಶದಲ್ಲಿ ಪತ್ತೆಯಾಗಿವೆ.
ಉತ್ತರಪ್ರದೇಶ ಸರಕಾರ ಅಧಿಕೃತವಾಗಿ ಈ ಘೋಷಣೆ ಮಾಡಿದ್ದು, ಲಕ್ನೊದ ಕಿಂಗ್ ಜಾರ್ಜ್ ಆಸ್ಪತ್ರೆಯಲ್ಲಿ ದಾಖಲಾದ ಸೋಂಕು ಪ್ರಕರಣಗಳ ಮಾದರಿ ಕಳುಹಿಸಿಕೊಡಲಾಗಿದ್ದು, ಅದರಲ್ಲಿ 2 ಪ್ರಕರಣ ಕಪ್ಪಾ ವೈರಸ್ ಎಂದು ದೃಢಪಟ್ಟಿದೆ. ಉಳಿದಂತೆ ರಾಜ್ಯದಲ್ಲಿ ಡೆಲ್ಟಾ ವೈರಸ್ ನ 107 ಪ್ರಕರಣಗಳು ಪತ್ತೆಯಾಗಿವೆ ಎಂದು ತಿಳಿಸಿದೆ.
ಉತ್ತರ ಪ್ರದೇಶದಲ್ಲಿ ಈ ಹಿಂದೆಯೇ ಎರಡೂ ಮಾದರಿ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಈ ಬಗ್ಗೆ ಮುನ್ನೆಚ್ಚರಿಕಾ ಕ್ರಮ ವಹಿಸಲಾಗಿದೆ ಎಂದು ಹೇಳಿಕೆಯಲ್ಲಿ ಸ್ಪಷ್ಟಪಡಿಸಲಾಗಿದೆ. 
ಕಪ್ಪಾ ವೈರಸ್ ನ ರೋಗ ಲಕ್ಷಣ ಬಗ್ಗೆ ಪ್ರಶ್ನಿಸಿದಾಗ ಈ ಹಿಂದೆಯೇ ಈ ಸೋಂಕು ಪತ್ತೆಯಾಗಿದೆ. ಕೊರೊನಾ ವೈರಸ್ ಮಾದರಿಯಲ್ಲೇ ಸ್ವಲ್ಪ ಭಿನ್ನವಾಗಿದ್ದು, ಚಿಕಿತ್ಸೆ ನೀಡಬಹುದಾಗಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೀನುಗಾರರ ಕಾರ್ಯಕ್ರಮಕ್ಕೆ ಚಾಲನೆ