ಖಾಸಗಿ ಅನುದಾನ ಶಿಕ್ಷಣ ಸಂಸ್ಥೆಗಳ ಪರವಾಗಿ ಉಚ್ಚನ್ಯಾಯಾಲಯ ತೀರ್ಪನ್ನ ನೀಡಿದೆ.ತಮ್ಮದೇ ಆದ ರೀತಿಯಲ್ಲಿ ಕೆಲ ಶಾಲೆಗಳು ಶುಲ್ಕ ನಿಗದಿ ಮಾಡುವ ಆದೇಶ ಮಾಡಿತ್ತು.ಶುಲ್ಕ ನಿಯಂತ್ರಣ ಅನ್ನುವ ಹೆಸರಿನಲ್ಲಿ ತನ್ನ ಸ್ವಾತಂತ್ರ್ಯ ಮತ್ತು ಗುಣಮಟ್ಟ ಕಟ್ಟಿಹಾಕಲು ಮುಂದಾಗಿತ್ತು. ಆದ್ರೆ ಈಗ ತಕ್ಕದಾದ ಉತ್ತರ ನ್ಯಾಯಾಲಯ ನೀಡಿದೆ. ನ್ಯಾಯಾಲಯದ ಮಹತ್ವವಾದ ತೀರ್ಪಿಗೆ ನಾವು ಸ್ವಾಗತ ಮಾಡ್ತೇವೆ. ಮೊದಲಿನಂತೆ ಖಾಸಗಿ ಶಾಲೆಗಳು ಖರ್ಚುವೆಚ್ಚಕ್ಕೆ ಸಂಬಂಧಪಟ್ಟಂತೆ ಶುಲ್ಕ ವಿಧಿಸಬಹುದೆಂಬ ಕೋರ್ಟ್ ಅದೇಶ ದುರುಪಯೋಗಪಡಿಸಿಕೊಳ್ಳದೇ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತೇವೆ ಎಂದು ಖಾಸಗಿ ಶಾಲೆಯ ಕಾಮ್ಸ್ ಕಾರ್ಯದರ್ಶಿ ಶಶಿಕುಮಾರ್ ಹೇಳಿದ್ದಾರೆ.