Publish Date: Sat, 16 May 2020 (21:15 IST)
Updated Date: Sat, 16 May 2020 (21:17 IST)
ಪತಿ ಮೇಲೆ ಹಲ್ಲೆ ನಡೆಸಿ ಪತ್ನಿ ಮೇಲೆ ಅತ್ಯಾಚಾರ ನಡೆಸಿದ ಘಟನೆ ನಡೆದಿದೆ.
ಮಂಗಳೂರಿನ ಸುರತ್ಕಲ್ ವ್ಯಾಪ್ತಿಯ ನಿತ್ಯಾನಂದ ಭಜನಾ ಮಂದಿರದ ಹತ್ತಿರ ಈ ಘಟನೆ ನಡೆದಿದ್ದು, ಆರೋಪಿಗಳನ್ನು ರವೀಂದ್ರ ಆಚಾರಿ, ಎ.ಪಿ.ಮೋಹನ್ ಗಣೇಶಪುರ, ಹರ್ಷಿತ್, ಸುಧಾಕರ ಬೊಳ್ಳಾಜೆ ಎಂದು ಗುರುತಿಸಲಾಗಿದ್ದು, ಇವರನ್ನು ಬಂಧನ ಮಾಡಲಾಗಿದೆ.
ತುಂಡು – ಗುಂಡು ಪಾರ್ಟಿ ನಡೆಸಿ ಬಾಟಲ್ ಗಳನ್ನು ಬೇರೊಬ್ಬರ ಮನೆ ಮುಂದೆ ಎಸೆದಿದ್ದರು. ಇದನ್ನು ಪ್ರಶ್ನಿಸಿದ್ದಕ್ಕೆ ಮಹಿಳೆಯೊಬ್ಬಳ ಮೇಲೆ ಆರೋಪಿ ರವೀಂದ್ರ ಆಚಾರಿ ಅತ್ಯಾಚಾರ ನಡೆಸಿದ್ದರೆ, ಉಳಿದವರು ಬಟ್ಟೆ ಹರಿದಿದ್ದಾರೆ ಎಂದು ಮಹಿಳೆ ದೂರಿದ್ದಾಳೆ.
ಪತಿಯ ಮೇಲೆ ಹಲ್ಲೆ ನಡೆಸಿ ಪತ್ನಿಯ ಮೇಲೆ ಆರೋಪಿಗಳು ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ.
Jagadeesh
Publish Date: Sat, 16 May 2020 (21:15 IST)
Updated Date: Sat, 16 May 2020 (21:17 IST)