Publish Date: Sun, 22 Dec 2019 (16:45 IST)
Updated Date: Sun, 22 Dec 2019 (16:47 IST)
ಆಂಧ್ರಪ್ರದೇಶದ ಕಾಮುಕ ಯುವಕನೊಬ್ಬ ರಾಜ್ಯದ ಯುವತಿಯೊಬ್ಬಳನ್ನು ಕಿಡ್ನಾಪ್ ಮಾಡಿ ಅತ್ಯಾಚಾರ ಮಾಡಿದ್ದಾನೆ.
ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಆರೋಪಿ ಕಾಮುಕ ಆಂಧ್ರಪ್ರದೇಶದ ಹರೀಶ್ ಎಂಬಾತನನ್ನು ಪೊಲೀಸರು ಬಂಧನ ಮಾಡಿದ್ದಾರೆ.
ಬಹಿರ್ದೆಸೆಗೆ ಹೋಗಿದ್ದ ಬಾಲಕಿಯನ್ನು ಹರೀಶ್ ಕಿಡ್ನಾಪ್ ಮಾಡಿ ಆಂಧ್ರದ ಕೆಲವು ಪ್ರದೇಶಗಳನ್ನು ಸುತ್ತಿಸಿದ್ದಾನೆ. ಯಾರೂ ಇಲ್ಲದ ಸ್ಥಳದಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ದೂರಲಾಗಿದೆ.
ಚಿತ್ರದುರ್ಗದ ರಾಂಪುರ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.